ಜೈಪುರ: ಕೊರೋನಾವೈರಸ್ ರೋಗಿಗಳಿಗೆ ಪಂತಂಜಲಿ ಆಯುರ್ವೇದ ಔಷಧ ಪ್ರಯೋಗದ ವಿವರಣೆ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರಾಜಸ್ಥಾನ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ನಿನ್ನೆ ತಿಳಿಸಿದ್ದಾರೆ.
ಮೂರು ದಿನಗಳೊಳಗೆ ವಿವರಣೆ ನೀಡುವಂತೆ ಆಸ್ಪತ್ರೆಗೆ ನೋಟಿಸ್ ನೀಡಿದ್ದೇವೆ. ಆಸ್ಪತ್ರೆ ರಾಜ್ಯಸರ್ಕಾರಕ್ಕೆ ಮಾಹಿತಿ ನೀಡಿಲ್ಲ, ಅನುಮತಿಯನ್ನು ಪಡೆದಿಲ್ಲ ಎಂದು ಜೈಪುರ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ. ನಾರೊತ್ತಮ್ ಶರ್ಮಾ ಹೇಳಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪಂತಂಜಲಿ ಆಯುರ್ವೇದ ಔಷಧಿಯ ಪ್ರಯೋಗದ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಈ ಔಷಧದಿಂದ ಕೊರೋನಾದಿಂದ ಗುಣಮುಖರಾಗಬಹುದು ಎಂಬ ಪ್ರಚಾರವನ್ನು ಆಯುಷ್ ಸಚಿವಾಲಯ ನಿಬರ್ಂಧಿಸಿದ ನಂತರ ಯೋಗ ಗುರು ರಾಮದೇವ್ ಬಿಡುಗಡೆ ಮಾಡಿರುವ ಔಷಧ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಆಯುಷ್ ಸಚಿವಾಲಯದ ಅನುಮತಿ ಇಲ್ಲದೆ ಪಂತಂಜಲಿ ಆಯುರ್ವೇದ ಔಷಧವನ್ನು ರಾಜ್ಯದಲ್ಲಿ ಔಷಧವಾಗಿ ಬಳಸುವುದಿಲ್ಲ ಎಂದು ರಾಜಸ್ಥಾನ ಸರ್ಕಾರ ಸ್ಪಷ್ಟಪಡಿಸಿದೆ. ಕೊರೋನಿಲ್ ನಿಂದ ಏಳು ದಿನಗಳಲ್ಲಿ ರೋಗ ಗುಣವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೊರೋನಾ ಸೋಂಕಿತರಿಗೆ ಔಷಧವಾಗಿ ಇದನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
ಜೀವ ರಕ್ಷಕ ಸಾಧನಗಳನ್ನು ನೆರವಿನಲ್ಲಿರುವ ರೋಗಿಗಳನ್ನು ಹೊರತುಪಡಿಸಿದಂತೆ ಸೋಂಕಿತ ವ್ಯಕ್ತಿಗಳ ಮೇಲಿನ ಕ್ಲಿನಿಕಲ್ ಪ್ರಯೋಗದ ವೇಳೆಯಲ್ಲಿ ಶೇ.100 ರಷ್ಟು ಯಶಸ್ಸು ಕಾಣಲಾಗಿದೆ ಎಂದು ಕೊರೋನಿಲ್ ಕಂಪನಿ ಹೇಳಿಕೊಂಡಿತ್ತು. ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಬಾಗಿತ್ವದಲ್ಲಿ ಹರಿದ್ವಾರದಲ್ಲಿನ ಪಂತಂಜಲಿ ಸಂಶೋಧನಾ ಕೇಂದ್ರ
ಈ ಔಷಧವನ್ನು ಕಂಡುಹಿಡಿದಿರುವುದಾಗಿ ರಾಮದೇವ್ ಹೇಳಿದ್ದಾರೆ.
ಪಂತಂಜಲಿ ಆಯುರ್ವೇದ ಔಷಧ ಸಂಬಂಧ ರಾಮದೇವ್ ಮತ್ತು ಕಂಪನಿ ಮುಖ್ಯಸ್ಥ ಅಚಾರ್ಯ ಬಾಲಕೃಷ್ಣ ವಿರುದ್ಧ ಎಫ್ ಐಆರ್ ದಾಖಲಿಸಲು ಬಿಹಾರದ ಮುಝಾಪ್ಫರ್ ಪುರ್ ನ ನ್ಯಾಯಾಲಯವೊಂದರಲ್ಲಿ ದೂರು ದಾಖಲಾಗಿದೆ. ಜೂನ್ 30ರಂದು ಈ ವಿಷಯದ ಬಗ್ಗೆಗಿನ ವಿಚಾರಣೆಯನ್ನು ಚೀಪ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಮುಂದೂಡಿದ್ದಾರೆ.


