ಕೊಚ್ಚಿ: ಖಾಸಗಿ ಬಸ್‍ಗಳು ಹೆಚ್ಚಿನ ಶುಲ್ಕ ವಿಧಿಸುವುದು ತಪ್ಪಲ್ಲ ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಹೆಚ್ಚಿನ ದರಗಳನ್ನು ರದ್ದುಪಡಿಸುವ ಸರ್ಕಾರದ ಆದೇಶವನ್ನು ಹೈಕೋರ್ಟ್ ಈ ಮೂಲಕ ನಿಯಂತ್ರಿಸಿದೆ. ಖಾಸಗಿ ಬಸ್ ಮಾಲೀಕರು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಬಸ್ ಮಾಲಕರ ಪರ ನಿಲುವು ವ್ಯಕ್ತಪಡಿಸಿದೆ. ಇದರೊಂದಿಗೆ ಕೆ ಎಸ್ ಆರ್ ಟಿ ಸಿ ಬಸ್‍ಗಳೂ ಕೂಡ ಹೆಚ್ಚುವರಿ ಶುಲ್ಕ ವಿಧಿಸಬಹುದು.
ಕೋವಿಡ್ ಲಾಕ್ ಡೌನ್ ಅವಧಿಯ ಅಂತ್ಯದವರೆಗೆ ಹೆಚ್ಚಿನ ದರ ಮುಂದುವರಿಯಲಿದೆ. ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ಬಸ್ ಸಂಚಾರ ನಡೆಸಬೇಕು. ಹೆಚ್ಚಳ ಕುರಿತು ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೇರಳ ಖಾಸಗಿ ಬಸ್ ಆಪರೇಟರ್ಸ್ ಫೆÇೀರಂ ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸಿ ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್ಥಿಕ ನಷ್ಟವಾಗದಂತೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಟಿಕೆಟ್ ದರ ಹೆಚ್ಚಿಸುವ ನಿಟ್ಟಿನಲ್ಲಿ ಪರ ನಿಲುವು ಪ್ರಕಟಿಸಿದ್ದರಿಂದ ರಾಜ್ಯದಲ್ಲಿ ಬಸ್ ದರ ಹೆಚ್ಚಿಸಿ ಇಂದಿನಿಂದ ಬಹುತೇಕ ಕಡೆಗಳಲ್ಲಿ ಖಾಸಗೀ ಬಸ್ ಗಳು ಸಂಚಾರ ಪುನರಾರಂಭಿಸಲಿದೆ.
ಕೋವಿಡ್‍ನ ಪರಿಷ್ಕøತ ದರವನ್ನು ಕ್ರಮೀಕರಿಸಲಾಗಿದೆ. 5 ಕಿ.ಮೀ ವ್ಯಾಪ್ತಿಗೆ ಕನಿಷ್ಠ ಶುಲ್ಕ 8 ರಿಂದ 12 ರೂ., ನಂತರದ ಕಿಲೋಮೀಟರಿಗೆ ಒಂದು ರೂಪಾಯಿ 10 ಪೈಸೆ ಹೆಚ್ಚಾಗುತ್ತದೆ. ಇದು ಪ್ರಸ್ತುತ 70 ಪೈಸೆ ಆಗಿತ್ತು. ಇದು ಕ್ರಮವಾಗಿ ರೂ .10, ರೂ .13, ರೂ .12, ರೂ .23 ಮತ್ತು ರೂ .17 ಕ್ಕೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಬಸ್ ಶುಲ್ಕ ವಿನಾಯತಿಯಿರುವವರು ಅರ್ಧದಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.


