HEALTH TIPS

ಶಬರಿಮಲೆ ಸನ್ನಿಧಿ 14 ರಂದು ತೆರೆಯಲಿದೆ ಎಂದ ಸಚಿವರು-ಭಕ್ತರ ಪ್ರವೇಶ ಬೇಡವೆಂದು ತಂತ್ರಿವರ್ಯರು

                 
      ಪತ್ತನಂತಿಟ್ಟು:  ಪ್ರಸಿದ್ದ ಶ್ರದ್ದಾ ಕೇಂದ್ರವಾದ ಶಬರಿಮಲೆ ದೇವಸ್ಥಾನದ ಮಾಸಿಕ ಪೂಜೆಗೆ ಸಂಬಂಧಿಸಿ ತಂತ್ರಿವರ್ಯರು ಮತ್ತು ರಾಜ್ಯ ದೈವಸ್ವಂ ಬೋರ್ಡ್ ಮಧ್ಯೆ ಭಿನ್ನಾಬಿಪ್ರಾಯ ಹುಟ್ಟಿಕೊಂಡಿದೆ.
    ಜೂ. 14 ರಂದು ಭಕ್ತರಿಗಾಗಿ ಶಬರಿಮಲೆ ದೇವಾಲಯ ತೆರೆಯಲಾಗುವುದು ಎಂದು ದೇವಸ್ವಂ ಮಂಡಳಿ ತಿಳಿಸಿದೆ. ಆದರೆ ಭಕ್ತರ ಏಕಾಏಕಿ ಆಗಮನದಿಂದ ರೋಗ ಏಕಾಏಕಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಕ್ಷೇತ್ರದ ತಂತ್ರಿವರ್ಯ ಕಂಠಾರರ್ ಮೋಹನರ್ ಅವರು ತಿಳಿಸಿರುವರು.
      ಶಬರಿಮಲೆ ಸನ್ನಿಧಾನದಲ್ಲಿ ನಡೆಯುವ ಮಾಸಿಕ ಪೂಜೆಗೆ ಭಕ್ತರಿಗೆ ಅವಕಾಶ ನೀಡಬಾರದು ಎಂಬುದು ತಂತ್ರಿ ಕಂಠಾರರ್ ಮೋಹನರ್ ಅವರ ನಿಲುವು. ಕೋವಿಡ್ 19 ರ ಹರಡುವಿಕೆಯಿಂzರ್ಶ್ರೀಕ್ಷೇತ್ರದ ಉತ್ಸವಗಳನ್ನು ಮುಂದೂಡಬೇಕು ಮತ್ತು ಭಕ್ತರ ದೇವಾಲಯ ಪ್ರವೇಶಕ್ಕೆ  ಅನುಮತಿ ನೀಡಬಾರದು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಮಾಸಿಕ ಪೂಜೆಗೆ ದೇವಾಲಯ  ತೆರೆಯುವ ಮೂಲಕ ಭಕ್ತರ ಪ್ರವಾಹದೋಪಾದಿಯ ಪ್ರವೇಶ ಸಾಧ್ಯತೆಯ ಭೀಕರತೆಯನ್ನು ಗ್ರಹಿಸಿ ಆಗಬಹುದಾದ ಪ್ರಮಾದಗಳನ್ನು ಪರಿಗಣಿಸಿ ತಂತ್ರಿವರ್ಯರು  ಪತ್ರದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿರುವರು. ಶಬರಿಮಲೆಯ ಹಬ್ಬಾಚರಣೆಗಳನ್ನು ಮುಂದೂಡಬೇಕು.  ಉತ್ಸವಗಳು ಪ್ರಾರಂಭವಾದ ಬಳಿಕ  ದೇವಾಲಯಕ್ಕೆ ಒಬ್ಬನೇ ಒಬ್ಬ ವೈರಸ್ ಬಾಧಿತ ಏನಾದರೂ ಪ್ರವೇಶಿಸಿದಲ್ಲಿ ಬಳಿಕ ಎಲ್ಲರೂ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ. ಅಸಂಖ್ಯ ಭಕ್ತರೂ ಸಂಕೀಣ್ ಸ್ಥಿತಿಗೆ ಕೊಂಡೊಯ್ಯಲ್ಪಡುವರು. ಬಳಿಕ ಸಂಪ್ರದಾಯದಂತೆ ಪೂಜಾ ವಿಧಿಗಳು ನಡೆಯಲಾರದು ಎಂದು ತಂತ್ರಿವರ್ಯರು ಸಮಗ್ರ ವಿವರಣೆಗಳೊಂದಿಗೆ ದೈವಸ್ವಂ ಸಚಿವರು, ಸರ್ಕಾರದ ಉನ್ನತ ಅಧಿಕಾರಿಗಳಿಗೆ ಪತ್ರ ಮುಖೇನ ವಿನಂತಿ ಮಾಡಿರುವರು.
     ಲಾಕ್‍ಡೌನ್ ಸಡಿಲಿಕೆಯ ಹಿನ್ನೆಲೆ ಮತ್ತು ದೇವಾಲಯಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಅನುಸರಿಸಿ ಮಾರ್ಚ್‍ನಲ್ಲಿ ನಡೆಸಬೇಕಿದ್ದ ಉತ್ಸವವನ್ನು ಪ್ರಸ್ತುತ ಈ ತಿಂಗಳು ನಡೆಸಲು ಕೇರಳ ದೈವಸ್ವಂ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಚಟುವಟಿಕೆಗಳು ಆರಂಭಗೊಂಡಿರುವುದಾಗಿ ಮಂಗಳವಾರ ದೇವಸ್ವಂ ಮಂಡಳಿಯ ಅಧ್ಯಕ್ಷರು ಹೇಳಿದ್ದರು. ಏತನ್ಮಧ್ಯೆ, ತಂತ್ರಿವರ್ಯರು ವಿರೋಧ ವ್ಯಕ್ತಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
     ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳಿರುವ  ತಮಿಳುನಾಡು ಮತ್ತು ತೆಲಂಗಾಣದಿಂದ ಸಾಲುಗಟ್ಟಿ ಬರುವ  ಭಕ್ತರು ಶಬರಿಮಲೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಾರೆ ಎಂದು ತಂತ್ರಿವರ್ಯರು ಎಚ್ಚರಿಸಿರುವರು.
         ಆದರೂ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್ ವಾಸು ಅವರು ಪ್ರತಿಕ್ರಿಯಿಸುತ್ತ ಕಂಠಾರರ್ ಮೋಹನರ್ ಅವರು ಎತ್ತಿದ ಕಳವಳವನ್ನು ಪತ್ರದಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಹೆಚ್ಚು ಭಕ್ತರ ಗಡಣ ಈ ಬಾರಿ ಶಬರಿಮಾಲೆಯಲ್ಲಿ ಇರಲಾರರು ಎಂದು ತಿಳಿಸಿರುವರು. ಮಾಧ್ಯಮ ವರದಿಗಳ ಪ್ರಕಾರ, ತಂತ್ರಿಗಳೊಂದಿಗೆ ಸಮಾಲೋಚಿಸಿದ ಬಳಿಕವಷ್ಟೇ ದೇವಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ ಮತ್ತು ದೇವಾಲಯದ ಪ್ರವೇಶವು ದೇವಸ್ವಂ ಮಂಡಳಿಯ ಆಡಳಿತಾತ್ಮಕ ವಿಷಯವಾಗಿದೆ ಎಂದು ವಾಸು ಹೇಳಿದ್ದಾರೆ. ದೇವಸ್ವಂ ಮಂಡಳಿಯು ಯಾತ್ರಾರ್ಥಿಗಳ ಪ್ರವೇಶವನ್ನು ನಿಷೇಧಿಸಲು ಮತ್ತು ಹಬ್ಬವನ್ನು ಮುಂದೂಡಲು ನಿರ್ಧರಿಸಿಲ್ಲ. ವರ್ಚುವಲ್ ಕ್ಯೂ ಮೂಲಕ ಮಾತ್ರ ಪ್ರವೇಶವನ್ನು ಅನುಮತಿಸಲಾಗುವುದು ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು ಎಂದು ವಾಸು ಹೇಳಿರುವರು.
              ತಂತ್ರಿವರ್ಯರ ಬೆನ್ನಿಗೆ ಕೆ.ಸುರೇಂದ್ರನ್
    ಏತನ್ಮಧ್ಯೆ, ಬಿಜೆಪಿ ರಾಜ್ಯ ಘಟಕವು ತಂತ್ರಿವರ್ಯರನ್ನು ಬೆಂಬಲಿಸಿ ರಂಗಕ್ಕಿಳಿದಂತಿದೆ. ತಂತ್ರಿವರ್ಯರ ಪ್ರಸ್ತಾಪವನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದರು. ಕೇರಳದ ಪ್ರಸ್ತುತ ಸನ್ನಿವೇಶದಲ್ಲಿ, ಶಬರಿಮಲೆ ಬರುವ ಯಾತ್ರಾರ್ಥಿಗಳು ದೊಡ್ಡ ಸಮಸ್ಯೆಯಾಗಲಿದ್ದು, ಯಾತ್ರಾರ್ಥಿಗಳ ಅತಿ ಮೀರಿದ ಪ್ರವೇಶವನ್ನು ಸರ್ಕಾರ ಕೈಬಿಡಬೇಕು ಎಂದು ಕೆ.ಸುರೇಂದ್ರನ್ ಹೇಳಿದರು. ಸರ್ಕಾರದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಬಿವರೇಜ್ ಔಟ್ ಲೆಟ್ ಗಳನ್ನು ತೆರೆದ ಅದೇ ಓಘದಲ್ಲಿ ಆರ್ಥಿಕ ಕ್ರೋಢೀಕರಣದ ಹುಚ್ಚಲ್ಲಿ ದೇವಾಲಯಗಳಿಗೆ ಕರೆತರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
    ಈ ಮಧ್ಯೆ ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ಉಂಟಾಗಿರುವ ಇಂತಹ ಭಿನ್ನ ವಿಚಾರಗಳಿಂದ ಎಚ್ಚೆತ್ತಿರುವ ದೈವಸ್ವಂ ಸಚಿವರು ಇಂದು ಅಧಿಕಾರಿಗಳ, ಸಚಿವರುಗಳ, ದೈವಸ್ವಂ ಬೋರ್ಡ್ ಹಾಗೂ ತಂತ್ರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries