ಕಾಸರಗೋಡು: ಅಂತರ್ ರಾಷ್ಟ್ರೀಯ ತಂದೆಯ ದಿನಾಚರಣೆಯ ಅಂಗವಾಗಿ, ಕಾಸರಗೋಡು ಐಸಿಡಿಎಸ್ ನೇತೃತ್ವದಲ್ಲಿ ನಿನ್ನೆ ಜಿಲ್ಲಾ ಮಟ್ಟದಲ್ಲಿ ತಂದೆಯೊಂದಿಗೆ ಒಂದು ಸೆಲ್ಫಿ ಪಂದ್ಯವನ್ನು ನಡೆಸಿದರು.
ಅಂಗನವಾಡಿ ಮಕ್ಕಳು ತಮ್ಮ ತಂದೆಗೆ ಪತ್ರಗಳನ್ನು ಬರೆದು ಸಣ್ಣ ಉಡುಗೊರೆಗಳನ್ನು ನೀಡುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಐಸಿಡಿಎಸ್ ನೇತೃತ್ವದ ತಂದೆಯ ದಿನಾಚರಣೆಯ ಅಂಗವಾಗಿ ಆನ್‍ಲೈನ್‍ನಲ್ಲಿ ಇನ್ನೂ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪರಿಸರ ದಿನದಲ್ಲಿ ಪುಟಾಣಿಗಳು ನೆಟ್ಟಿರುವ ಸಸಿಗಳನ್ನು ಪರಿಚಯಿಸುವ ಚಟುವಟಿಕೆಗಳಲ್ಲಿ ಪುಟಾಣಿಗಳೂ, ಪೋಷಕರೂ ಪಾಲ್ಗೊಂಡರು.
ಲಾಕ್‍ಡೌನ್ ಸಂದರ್ಭ ಮನೆಗಳಲ್ಲಿ ತಮ್ಮ ಪುಟಾಣಿಗಳೊಂದಿಗೆ ದಿನ ಕಳೆದ ತಂದೆಯಂದಿರಿಗೆ ಐಸಿಡಿಎಸ್ ಶುಭಾಶಯ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಐಸಿಡಿಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ನೇತೃತ್ವ ವಹಿಸಿದ್ದರು.

