ಕುಂಬಳೆ: ಮಣ್ಣು ಕುಸಿದು ಮೈಮೇಲೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಪುತ್ತಿಗೆಯಲ್ಲಿ ನಡೆದಿದೆ.
ಪುತ್ತಿಗೆ ಸಮೀಪದ ಮುಖಾರಿಕಂಡ ಕೋಡಿಮೂಲೆ ಎಂಬಲ್ಲಿ ಖಾಸಗೀ ವ್ಯಕ್ತಿಯೊಬ್ಬರ ಹಿತ್ತಲಲ್ಲಿ ಡ್ರೈನೇಜ್ ನಿರ್ಮಿಸುವ ವೇಳೆ ಜೆಸಿಬಿ ಯಿಂದ ಹಠಾತ್ ಮಣ್ಣು ಕುಸಿದು ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪೆರ್ಲ ಕಾಟುಕುಕ್ಕೆ ನಿವಾಸಿ ಹರ್ಷಿತ್ ಕುಮಾರ್(36) ನ ಮೇಲೆ ಬಿದ್ದು ಘಟನೆ ನಡೆದಿದೆ. ಮೃತದೇಹವನ್ನು ಬಳಿಕ ಮೇಲೆತ್ತಿ ಮಹಜರಿಗೆ ಕಾಸರಗೋಡಿಗೆ ಕೊಂಡೊಯ್ಯಲಾಯಿತು. ಏತನ್ಮಧ್ಯೆ ಮಳೆಗೆ ಮಣ್ಣು ಕುಸಿದು ಬಿದ್ದು ಮೃತಪಟ್ಟನು ಎಂಬ ರೀತಿಯಲ್ಲಿ ದೂರು ದಾಖಲಿಸಲು ಯತ್ನಿಸಲಾಗುತ್ತಿದ್ದು, ಕುಂಬಳೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.


