ತಿರುವನಂತಪುರ: ಪ್ರತಿಪಕ್ಷಗಳ ಸಹಿತ ಹಲವು ಸಂಘಟನೆಗಳ ತೀವ್ರ ಪ್ರತಿಭಟನೆಯ ಬಳಿಕ ಲಾಕ್ ಡೌನ್ ಕಾಲಾವಧಿಯ ಅಧಿಕ ವಿದ್ಯುತ್ ಬಿಲ್ ಪಾವತಿಗೆ ಕೊನೆಗೂ ರೀಯಾಯಿತಿ ನೀಡಲು ಇಲಾಖೆ ಹಸಿರು ನಿಶಾನೆ ತೋರಿಸಿದೆ. ಲಾಕ್ ಡೌನ್ ಜಾರಿಗೆ ಬಂದ ದಿನದಿಂದ ರಿಯಾಯಿತಿ ಲಭ್ಯವಿರುತ್ತದೆ. ಲಾಕ್ ಡೌನ್ ಗೆ ಮುಂಚಿನ ಸರಾಸರಿ ಬಿಲ್ ಮತ್ತು ಲಾಕ್ ಡೌನ್ ಅವಧಿಯ ಮೊತ್ತದ ನಡುವಿನ ಸರಾಸರಿ ವ್ಯತ್ಯಾಸವನ್ನು ಗಮನಿಸಿ ಹೆಚ್ಚುವರಿಯಾಗಿ ಹೇರಲ್ಪಟ್ಟ ಮೊತ್ತದಿಂದ ಶೇ. 20 ರಿಂದ ಶೇ.100 ರ ವರೆಗೆ ರೀಯಾಯಿತಿ ದೊರೆಯಲಿದೆ.
ಗೃಹ ಬಳಕೆಯ ವಿದ್ಯುತ್ ಬಿಲ್ ಗಳಲ್ಲಿ ರೀಯಾಯಿತಿ ನೀಡಲಿದ್ದು ಅದರ ಜೊತೆಗೆ ಗೃಹ ಬಳಕೆಯೇತರ ಬಿಲ್ ಮೊತ್ತದಲ್ಲಿ ಸ್ಥಿರ ಶುಲ್ಕದ ಮೇಲಿನ ಬಡ್ಡಿಯನ್ನು ಶೇ.25 ಮನ್ನಾ ಮಾಡಲಾಗುವುದು.
ಗೃಹ ಬಳಕೆಯೇತರ ಗ್ರಾಹಕರು ಲಾಕ್ ಡೌನ್ ಸಂದರ್ಭ ವಿದ್ಯುತ್ ಬಳಸದೇ ಇರುವುದರಿಂದ ಶೇ.25 ಬಡ್ಡಿ ರಿಯಾಯಿತಿ ನೀಡಲಾಗಿದೆ ಎಂದಿರುವ ಇಲಾಖೆ ಗೃಹ ಬಳಕೆದಾರರಿಗೆ ವಿದ್ಯುತ್ ಬಿಲ್ ಪಾವತಿಸಲು ಬಡ್ಡಿದರ ಕಡಿತದೊಂದಿಗೆ ಡಿಸೆಂಬರ್ 31ರ ವರೆಗೆ ಕಾಲಾವಧಿ ವಿಸ್ತರಿಸಲು ಸೂಚಿಸಲಾಗಿದೆ.


