ತಿರುವನಂತಪುರ: ಕೆ ಎಸ್ ಆರ್ ಟಿ ಸಿ ಯ ವ್ಯವಸ್ಥಾಪಕ ನಿರ್ದೇಶಕರಾಗಿ ಬಿಜು ಪ್ರಭಾಕರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಜು ಪ್ರಭಾಕರ್ ಪ್ರಸ್ತುತ ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿಯಾಗಿರುವರು. ಅವರು ಕೆಎಸ್‍ಆರ್‍ಟಿಸಿಯಲ್ಲಿ ಹೆಚ್ಚುವರಿ ಜವಾಬ್ದಾರಿ ವಹಿಸಲಿದ್ದಾರೆ ಎಂದು ಸರ್ಕಾರ ಸಚಿವ ಸಂಪುಟ ನಿರ್ಧಾರಗಳಲ್ಲಿ ತಿಳಿಸಿದೆ.
ಎಂ.ಪಿ. ದಿನೇಶ್ ಅವರು ಈ ವರೆಗೆಕೆ ಎಸ್ ಆರ್ ಟಿ ಸಿ ಯ ಎಂಡಿ ಆಗಿದ್ದರು. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಜೋತಿಲಾಲ್ ಅವರು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಾಗಲಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ ಎಸ್ ಆರ್ ಟಿ ಸಿ ಬಸ್ ಗಳು ಕರೋನಾ ವೈರಸ್ ಲಾಕ್ ಡೌನ್ ಬಳಿಕ ನೀಡಲಾದ ನಿಯಂತ್ರಣ ಸಡಿಲಿಕೆಯ ಬಳಿಕ ಸೇವೆಯನ್ನು ಪುನರಾರಂಭಿಸಿದೆ. ಖಾಸಗಿ ಬಸ್ಸುಗಳೂ ಸಂಚಾರ ನಡೆಸುತ್ತಿವೆ.


