ಕೊಚ್ಚಿ: ಕೋವಿಡ್ ನಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು 26 ಉದ್ಯೋಗಿಗಳು ಕ್ಯಾರೆಂಟೈನ್‍ಗೆ ಒಳಗಾಗಿದ್ದು ಆದರೆ ಹೈಕೋರ್ಟ್ ನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಪ್ರಕರಣಗಳ ದೈನಂದಿನ ಚಟುವಟಿಕೆಗಳನ್ನು ಆದಷ್ಟು ಕಡಿತಗೊಳಿಸಿ ಕಾರ್ಯಕಲಾಪ ನಡೆಸಲು ಹೈಕೋರ್ಟ್ ಆಡಳಿತ ಸಮಿತಿ ಮತ್ತು ಅಡ್ವೊಕೇಟ್ ಜನರಲ್ ಸಭೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ಥಾಮಸ್ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಕೋವಿಡ್ ಪೀಡಿತ ಪೆÇಲೀಸ್ ಅಧಿಕಾರಿಯೊಬ್ಬರು ಹೈಕೋರ್ಟ್‍ನಲ್ಲಿ ವರದಿ ಸಲ್ಲಿಸಲು ಬಂದಿದ್ದು ಇದರಿಂದ ನ್ಯಾಯಮೂರ್ತಿಗಳು ಕ್ವಾರಂಟೈನ್ ಗೊಳಗಾಗಲು ನಿರ್ಧರಿಸಿದರು. ಇದನ್ನು ಅನುಸರಿಸಿ 26 ಉದ್ಯೋಗಿಗಳು ಕ್ವಾರಂಟೈನ್ ಗೊಳಗಾಗಲು ತೀರ್ಮಾನಿಸಿದ್ದಾರೆ. ಹೈಕೋರ್ಟ್ ಬಾರ್ ಅಸೋಸಿಯೇಶನ್ ಕಚೇರಿಯನ್ನು ಮುಚ್ಚಲಾಗಿದೆ. ನ್ಯಾಯಮೂರ್ತಿ ಸುನಿಲ್ ಥಾಮಸ್ ಅವರ ಪೀಠದ ಪಕ್ಕದ ಕಚೇರಿಯನ್ನು ಮುಚ್ಚಲಾಗಿದೆ.
ನ್ಯಾಯಮೂರ್ತಿ ಮತ್ತು ಸಿಬ್ಬಂದಿಗಳು ಕೋವಿಡ್ ಪರಿಶೀಲನೆಗೆ ಒಳಪಟ್ಟ ಬಳಿಕ ವಕೀಲರ ಸಂಘಟನೆಯು ಹೈಕೋರ್ಟ್‍ನ್ನು ಮುಚ್ಚುವಂತೆ ಒತ್ತಾಯಿಸಿ ಪತ್ರವೊಂದನ್ನು ನೀಡಿತ್ತು. ಆದರೆ ನ್ಯಾಯಾಲಯವನ್ನು ಮುಚ್ಚುವ ಅಗತ್ಯ ಇಲ್ಲ ಎಂದು ನಿರ್ಧರಿಸಿದ ಆಡಳಿತ ಸಮಿತಿ, ವಕೀಲರ ಅನುಪಸ್ಥಿತಿಯಲ್ಲಿ ಪ್ರಕರಣವನ್ನು ಪರಿಗಣಿಸುವುದಿಲ್ಲ ಅಥವಾ ಆದೇಶ ಹೊರಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಕೋವಿಡ್ ಬಾಧಿತ ಪೆÇಲೀಸ್ ಅಧಿಕಾರಿ ಜೂ.17 ರಂದು ಬೆಳಿಗ್ಗೆ ಪ್ರಕರಣವೊಂದರ ವರದಿಯೊಂದಿಗೆ ಹೈಕೋರ್ಟ್‍ಗೆ ಬಂದಿದ್ದರು. ಅವರು ನ್ಯಾಯಪೀಠಕ್ಕೂ ಭೇಟಿ ನೀಡಿದ್ದರು. ಕಳಮಶ್ಚೇರಿ ಪೆÇಲೀಸ್ ಠಾಣೆಯ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ಹಲವು ಊಹಾಪೋಪಗಳು ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಇಂತಹ ನಿರ್ಣಯ ಹೊರಬಿದ್ದಿದೆ.


