ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ವಾಮಂಜೂರಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನ ಸಿಬ್ಬಂದಿಗಳಿಗೆ ಅತ್ಯಾಧುನಿಕ ಸುರಕ್ಷಾ ಕವಚ ಒದಗಿಸಲಾಗಿದೆ.
ಕಣ್ಣೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಾಧಿಸಿ ಅಬಕಾರಿ ವಾಹನದ ಚಾಲಕ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಾಹನ ತಪಾಸಣಾ ವೇಳೆ ಸಂರಕ್ಷಣೆಗಾಗಿ ಸುರಕ್ಷಾ ಕವಚ ಬಳಕೆಗೆ ತರಲಾಗಿದೆ. ಅನ್ಯ ರಾಜ್ಯಗಳಿಂದ ಚೆಕ್ ಪೋಸ್ಟ್ ಮೂಲಕ ಪ್ರತಿನಿತ್ಯ ಹಲವಾರು ವಾಹನಗಳು ಆಗಮಿಸುತ್ತಿದ್ದು, ಇವುಗಳ ತಪಾಸಣೆಯ ವೇಳೆ ರೋಗ ಹರಡದಂತೆ ಮುನ್ನೆಚ್ಚರಿಕೆಗಾಗಿ ಕವಚ ವಿತರಿಸಲಾಗಿದೆ. ಪ್ರಸ್ತುತ ದೇಹಪೂರ್ತಿ ಆವರಿಸುವ ವೈದ್ಯಕೀಯ ಸಿಬ್ಬಂದಿಗಳು ಧರಿಸುವ ಇಂತಹ ಕವಚ ವಿತರಿಸಲಾಗಿದೆ.


