ಉಪ್ಪಳ: ಉಪ್ಪಳ ಹನುಮಾನ್ ನಗರ ಮುಸೋಡಿ ಹಾಗು ಮಣಿಮುಂಡದಲ್ಲಿ ಕಡಲ್ಕೊರೆತ ಆರಂಭಗೊಂಡಿದ್ದು, ಹನುಮಾನ್ ನಗರದಲ್ಲಿ ಎರಡು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಹಲವು ಮನೆಗಳು ಅಪಾಯದಂಚಿನಲ್ಲಿದೆ.
ಕಳೆದ ಮೂರು ದಿನಗಳಿಂದ ಕಡಲ್ಕೊರೆತ ಭೀತಿಗೆ ಕಾರಣವಾಗಿದೆ. ಹನುಮಾನ್ ನಗರದಲ್ಲಿ ಶರ್ಮಿಳ ಮತ್ತು ಸೀತಾಲಕ್ಷ್ಮಿ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ ಲಕ್ಷ್ಮಣ, ಜಯ ಕುಮಾರ್, ಅಶೋಕ್, ಪುಷ್ಪಾ, ವಿಕ್ರಮ್ ಸಾಲ್ಯಾನ್, ರಮೇಶ್, ಕೃಷ್ಣಪ್ಪ ಸಹಿತ ಹಲವು ಮನೆಗಳು ಅಪಾಯದಂಚಿನಲ್ಲಿದೆ. ಈ ಪರಿಸರದಲ್ಲಿ ಮೋಹಿನಿ ಅವರ ಮನೆ ಕಳೆದ ವರ್ಷ ಸಮುದ್ರ ಪಾಲಾಗಿತ್ತು. ಮಣಿಮುಂಡದಲ್ಲಿ ಜಯರಾಮ, ಕೇಶವ, ಅಲೀಮ, ಅವ್ವಾಬಿ ಅವರ ಮನೆಗಳು ಅಪಾಯದಂಚಿನಲ್ಲಿದೆ. ಈ ಪರಿಸರದ ರಶೀದ್ ಮತ್ತು ಇಬ್ರಾಹಿಂ ಅವರ ಮನೆ ಕಳೆದ ವರ್ಷವೂ ಸಮುದ್ರ ಪಾಲಾಗಿತ್ತು. ಕಳೆದ ವರ್ಷ ಮುಸೋಡಿಯಲ್ಲಿಯೂ ಹಲವು ಮನೆಗಳು ಸಮುದ್ರ ಪಾಲಾಗಿತ್ತು. ಹನುಮಾನ್ ನಗರದಲ್ಲಿ ಕಳೆದ ವರ್ಷ ಹಲವು ಮಂದಿಯ ಆವರಣ ಗೋಡೆ ಸಮುದ್ರ ಪಾಲಾಗಿತ್ತು. ಇದೀಗ ಹಿತ್ತಿಲಿಗೆ ನೀರು ನುಗ್ಗಿದೆ. ಸುಮಾರು 50 ಮೀಟರ್‍ನಷ್ಟು ಸಮುದ್ರ ಮುಂದಕ್ಕೆ ಬಂದಿದೆ.


