HEALTH TIPS

ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ, ರೋಗಿಯ ಜೀವ ಉಳಿಸಬಲ್ಲ ಔಷಧಿ ಸಂಶೋಧನೆ?!


      ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು, ಅತ್ಯಂತ ಗಂಭೀರವಾದ ಕೊವಿಡ್-19 ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ.
     ಅತ್ಯಂತ ಕಡಿಮೆ ಬೆಲೆಗೆ ಸಿಗುವ 'ಡೆಕ್ಸಮೆಥಾಸೊನ್'(Dexamethasone) ಎಂಬ ಐಷಧಿಯನ್ನು ಕೊವಿಡ್-19 ನಿಂದ ಬಳಲುತ್ತಿರುವ ರೋಗಿಗೆ ನೀಡಿದರೆ ಗುಣವಾಗುವ ಸಾಧ್ಯತೆ ಹೆಚ್ಚು ಎಂದು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.
    ಡೆಕ್ಸಮೆಥಾಸೊನ್ ನೀಡಿದ್ದರಿಂದ ಇಂಗ್ಲೆಂಡ್‍ನಲ್ಲಿ ಸಾವಿನ ದವಡೆಯಲ್ಲಿದ್ದ ಸುಮಾರು 5 ಸಾವಿರ ರೋಗಿಗಳನ್ನು ಪಾರುಮಾಡಲಾಗಿದೆ. 20 ರೋಗಿಗಳ ಪೈಕಿ 19 ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಇತರೇ ರೋಗಗಳಿಂದಾಗಿ ಹೈ ರಿಸ್ಕ್ ನಲ್ಲಿರುವ ರೋಗಿಗಳಿಗೆ ವೆಂಟಿಲೇಟರ್ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ತಂಡದಲ್ಲಿದ್ದ ಪೆÇ್ರ. ಪೀಟರ್ ಹಾರ್ಬಿ ಪ್ರತಿಕ್ರಿಯಿಸಿ, ಸದ್ಯ ಸಾವನ್ನು ತಪ್ಪಿಸಲು ಇರುವ ಏಕೈಕ ಔಷಧಿ ಇದು. ಈ ಡ್ರಗ್ಸ್ ಸಾವಿನ ಪ್ರಮಾಣವನ್ನು ಭಾರೀ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ. ಕೊರೋನಾ ವೈರಸ್ ಲಸಿಕೆ ವಿಚಾರದಲ್ಲಿ ಇದೊಂದು ಮಹತ್ವದ ತಿರುವ ನೀಡಬಲ್ಲ ವಿಚಾರ ಎಂದು ಹೇಳಿದ್ದಾರೆ.
       ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಈ ಔಷಧಿಯಿಂದ ಖಂಡಿತವಾಗಿಯೂ ಲಾಭವಿದೆ. ಒಂದು ಡೆಕ್ಸಮೆಥಾಸೊನ್ ಗೆ 5 ಪೌಂಡ್(481. ರೂ.) ಖರ್ಚಾಗಬಹುದು. ಹೀಗಾಗಿ 10 ದಿನಗಳಿಗೆ 35 ಪೌಂಡ್(3,400 ರೂ.) ಆಗಬಹುದು. ಈ ಡ್ರಗ್ಸ್ ವಿಶ್ವದೆಲ್ಲೆಡೆ ಲಭ್ಯವಿದೆ. ವಿಶೇಷವಾಗಿ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries