ನವದೆಹಲಿ: ಇದುವರೆಗೆ ನಮ್ಮ ಸಮೀಪದ ಹೋಟೆಲ್, ರೆಸ್ಟೊರೆಂಟ್ ಹಾಗೂ ಇತರೆ ಸ್ಥಳಗಳನ್ನು ತೋರಿಸುತ್ತಿದ್ದ ಗೂಗಲ್, ಇನ್ನುಮುಂದೆ ನಮ್ಮ ಸಮೀಪಿದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ತೋರಿಸಲಿದೆ ಎಂದು ಶುಕ್ರವಾರ ಗೂಗಲ್ ತಿಳಿಸಿದೆ.
ಸರ್ಚ್ ನೀಯರ್‍ಬೈ ಆಪ್ಷನ್ ಮೂಲಕ ಈಗ ಕೊರೋನಾ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತಿದೆ. ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಮತ್ತು ಮ್ಯಾಪ್ ಸಂಯೋಜನೆಯೊಂದಿಗೆ ಈ ಫೀಚರ್ ಬಳಕೆದಾರರಿಗೆ ಲಭ್ಯವಿದೆ ಗೂಗಲ್ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹಾಗೂ ಮೈಗೊವ್ ಮೂಲಕ ಪಡೆದ ಮಾಹಿತಿಯನ್ನು ಆಧರಿಸಿ, ಸರ್ಕಾರದಿಂದ ಮಾನ್ಯತೆ ಪಡೆದ ಕೊವಿಡ್- 19 ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಗೂಗಲ್ ಜನರಿಗೆ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ದೇಶಾದ್ಯಂತ ಸುಮಾರು 300 ನಗರಗಳಲ್ಲಿ 700 ಟೆಸ್ಟಿಂಗ್ ಲ್ಯಾಬ್ ಗೂಗಲ್ ಸರ್ಚ್‍ನಲ್ಲಿ ನೋಂದಣಿ ಮಾಡಿಕೊಂಡಿವೆ. ಇದರಿಂದ ಜನರಿಗೆ ಅನುಕೂಲವಾಗಲಿದ್ದು, ಸುಲಭದಲ್ಲಿ ತಾವಿರುವ ಸ್ಥಳಕ್ಕೆ ಸಮೀಪದಲ್ಲಿಯೇ ಕೊವಿಡ್ -19 ಪರೀಕ್ಷಾ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ.


