ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕನೇ ಹಂತದಲ್ಲಿ ಜಾರಿಗೊಳಿಸಲಾದ ಭಾನುವಾರದ ಸಂಪೂರ್ಣ ಲಾಕ್ ಡೌನ್ ನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಸರ್ಕಾರವು ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ವ್ಯವಸ್ಥೆ ಹಿಂಪಡೆದಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಶನಿವಾರ ತಿಳಿಸಿದೆ.
ರಾಜ್ಯದ ಮದ್ಯದಂಗಡಿಗಳು ಭಾನುವಾರವೂ ತೆರೆಯಲಿವೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಪ್ಕೋ ಅಪ್ಲಿಕೇಶನ್‍ನಲ್ಲಿ ಮದ್ಯ ಖರೀದಿಸುವ ಬುಕಿಂಗ್ ಪ್ರಾರಂಭವಾಗಿದೆ. ಕಂಟೋನ್ಮೆಂಟ್ ವಲಯಗಳು ಮತ್ತು ಇತರ ತೀವ್ರ ವಲಯಗಳಲ್ಲಿನ ಎಲ್ಲಾ ಜಾಗ್ರತೆಗಳು ಈ ಹಿಂದಿನಂತೆಯೇ ಇರಲಿದೆ. ಅಂತಹ ವಲಯಗಳ ನಿಬರ್ಂಧಗಳ ಸಡಿಲಿಸುವಿಕೆಯಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಮದು ಸರ್ಕಾರ ಸ್ಪಷ್ಟಪಡಿಸಿದೆ.
ಆದರೆ ಜನರು ಸರ್ಕಾರದ ಎಚ್ಚರಿಕೆಯನ್ನು ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸತತ ಎಂಟು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 100 ಕ್ಕಿಂತ ಹೆಚ್ಚುತ್ತಿದೆ. ರಾಜ್ಯದಲ್ಲಿ ಶುಕ್ರವಾರ ಸುಮಾರು 150 ಜನರಿಗೆ ಕೋವಿಡ್ ರೋಗನಿರ್ಣಯ ಮಾಡಲಾಗಿತ್ತು. ಕೋವಿಡ್ ಬಾಧಿತರ ಪೈಕಿ ಶುಕ್ರವಾರ 65 ರೋಗಿಗಳಲ್ಲಿ ಫಲಿತಾಂಶಗಳು ನಕಾರಾತ್ಮಕವಾಗಿವೆ. ಈವರೆಗೆ ರಾಜ್ಯದಲ್ಲಿ 2006 ಕೋವಿಡ್ ಬಾಧಿತರನ್ನು ಗುರುತಿಸಲಾಗಿದೆ. ಈ ಮಧ್ಯೆ ತಿರುವನಂತಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಅಲ್ಲದೆ ಗುರುತಿಸಲಾಗದ ಕೋವಿಡ್ ಪ್ರಕರಣಗಳೂ ಪತ್ತೆಯಾಗಿರುವುದು ಆತಂಕಕ್ಕೂ ಕಾರಣವಾಗಿದೆ.


