ಕಾಸರಗೋಡು: ಮಹಿಳೆಯರನ್ನು ಸಂರಕ್ಷಿಸಲು ವನ್ ಸ್ಟಾಪ್ ಸೆಂಟರ್ 2019ರ ಅಕ್ಟೋಬರ್ ತಿಂಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಅಂದಿನಿಂದಲೇ ಶಾಲೆಗಳಲ್ಲಿ, ಸಿ.ಡಿ.ಎಸ್.ಗಳಲ್ಲಿ, ಕ್ಲಬ್‍ಗಳಲ್ಲಿ, ಗ್ರಂಥಾಲಯಗಳಲ್ಲಿ ಮೊದಲಾದೆಡೆ ಈ ಸೇವೆಗಳ ಕುರಿತು ಜಾಗೃತಿ ತರಬೇತಿ ನಡೆಸಿಕೊಂಡು ಬರಲಾಗುತ್ತಿದೆ.
ಮಹಿಳೆಯರನ್ನು ಸಂರಕ್ಷಿಸುವ ಕಾನೂನು ಸಂಬಂಧ ಚಟುವಟಿಕೆ ನಡೆಸುತ್ತಿರುವ ವನ್ ಸ್ಟಾಪ್ ಸೆಂಟರ್ ಕಾರ್ಯಕರ್ತರ ವೀಡಿಯೋ ಕರೆ ಸಭೆ ಪ್ರತಿ ಶುಕ್ರವಾರ ರಾತ್ರಿ 8 ಗಂಟೆಗೆ ಮಹಿಳಾ ಸಂರಕ್ಷಣೆ ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಪ್ರಸ್ತುತ ಪರಿಸ್ಥಿತಿಗಳ ಅವಲೋಕನ ನಡೆಸಲಾಗುತ್ತಿದೆ. ಪಿಂಕ್ ಪೆÇಲೀಸ್, ಸೀತಾಲಯ, ಸ್ನೇಹಿತೆ, ಕುಟುಂಬಶ್ರೀ ಸಹಿತ ವ್ಯವಸ್ಥೆಗಳ ಸಹಕಾರದೊಂದಿಗೆ ಚಟುವಟಿಕೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ ತಿಳಿಸಿರುವರು.


