ಕಾಸರಗೋಡು: ಡೀಸೆಲ್ ಬೆಲೆ ಏರಿಕೆ ಹಿಂತೆಗೆದುಕೊಳ್ಳಬೇಕು, ಖಾಸಗಿ ಬಸ್‍ಗಳಿಗೆ ಡೀಸೆಲ್ ಸಬ್ಸಿಡಿ ನೀಡಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರ ಪರಿಷ್ಕರಿಸಬೇಕು, ಬಸ್ ಉದ್ದಿಮೆಯನ್ನು ರಕ್ಷಿಸಲು ಬಡ್ಡಿ ರಹಿತ ಸಾಲ ಮಂಜೂರು ಮಾಡಬೇಕು, ರಸ್ತೆ ಸುಂಕ ರದ್ದುಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಸಮಿತಿ ಚೆರ್ಕಳ ಪೇಟೆಯಲ್ಲಿ ಧರಣಿ ನಡೆಸಿತು.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ.ಅಹಮ್ಮದ್ ಶರೀಫ್ ಧರಣಿ ಉದ್ಘಾಟಿಸಿದರು. ಅಧ್ಯಕ್ಷ ಎನ್.ಎಂ.ಹಸೈನಾರ್ ಅಧ್ಯಕ್ಷತೆ ವಹಿಸಿದರು. ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಕೆ.ಗಿರೀಶ್ ಮುಖ್ಯ ಭಾಷಣ ಮಾಡಿದರು. ವ್ಯಾಪಾರಿ ವ್ಯವಸಾಯಿ ಚೆರ್ಕಳ ಯೂನಿಟ್ ಅಧ್ಯಕ್ಷ ಬಿ.ಎಂ.ಶರೀಫ್, ಹೊಸದುರ್ಗ ತಾಲೂಕು ಅಧ್ಯಕ್ಷ ಸಿ.ರವಿ, ಜಿಲ್ಲಾ ಕೋಶಾಧಿಕಾರಿ ಪಿ.ಎ.ಮುಹಮ್ಮದ್ ಕುಂಞÂ ಮೊದಲಾದವರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸಿ.ಎ.ಮುಹಮ್ಮದ್ ಕುಂಞÂ ಸ್ವಾಗತಿಸಿದರು. ಉಪಾಧ್ಯಕ್ಷ ತಾರಾನಾಥ ಮಧೂರು ವಂದಿಸಿದರು.


