HEALTH TIPS

ಶಿರಿಯ ಸರ್ಕಾರಿ ಶಾಲಾ ಸ್ಥಳ ಅತಿಕ್ರಮಣ- ವಿಜಿಲೆನ್ಸ್ ತನಿಖೆಗೆ ಆಗ್ರಹ

            ಕುಂಬಳೆ: ಮಂಗಲ್ಪಾಡಿ ಗ್ರಾಮ ಪಂಚಾಯತಿ ಶಿರಿಯಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಶಾಲೆಗೆ ಹೋಗುವ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಸ್ವಾಧೀನಪಡಿಸಿಕೊಂಡಿದ್ದು, ಶಾಲಾ ರಕ್ಷಕ ಶಿಕ್ಷಕ ಸಮಿತಿ ಸಹಾಯದಿಂದ ಈ ಪ್ರದೇಶದಲ್ಲಿ ಕೆಲವು ಮಾಫಿಯಾ ನೇತೃತ್ವದಲ್ಲಿ ಶಾಲಾ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ ಘಟನೆಯ ಬಗ್ಗೆ  ತನಿಖೆ ನಡೆಸಬೇಕೆಂದು ಶಿರಿಯಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಗುರುವಾರ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
         ಏಳು ವರ್ಷಗಳ ಹಿಂದೆ ಆರಂಭಿಸಿದ ಶಾಲಾ ಕಟ್ಟಡವೊಂದರ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗೋಡೆಯ ನಿರ್ಮಾಣದ ಮುಕ್ಕಾಲು ಭಾಗ ಪೂರ್ಣಗೊಳ್ಳುತ್ತಿರುವಂತೆ ಕೆಲವು ಸಮಾಜ ವಿರೋಧಿ ಕಾರ್ಯಕರ್ತರು ಈ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.  ಖಾಸಗೀ ವ್ಯಕ್ತಿಗಳು ಶಾಲಾ ನಿವೇಶನದ ಕೆಲವೊಂದು ಭಾಗಗಳನ್ನು ತಮ್ಮ ವಶಕ್ಕೆ ಪಡೆದಿದ್ದು, ಅವರ ವಾಹನಗಳು ಅವ್ಯಾಹತವಾಗಿ ಈ ದಾರಿಯ ಮೂಲಕ ಸಾಗುತ್ತಿದೆ. ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಪಿ.ಶಾಮಲಾದೇವಿ ಅವರು ಶಾಲೆಗೆ ಎಂಟು ತರಗತಿ ಕೊಠಡಿಗಳನ್ನು ನಿರ್ಮಿಸಲು ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ಎ.ಕೆ.ಎಂ.ಅಶ್ರಫ್ ಶಾಲಾಭಿವೃದ್ದಿಗೆ ವಿಶೇಷ ಆಸಕ್ತಿ ವಹಿಸಿದ್ದರು. ಈ ಪೈಕಿ ಎರಡು ತರಗತಿ ಕೊಠಡಿಗಳು ನಿರ್ಮಾಣ ಪೂರ್ಣಗೊಂಡರೂ ತರಗತಿಗಳನ್ನು ಉದ್ಘಾಟಿಸಿಲ್ಲ. ಪೊಳ್ಳು ನಪಗಳ ಮೂಲಕ ಉದ್ಘಾಟನೆಯನ್ನು ಮುಂದೂಡಲಾಗುತ್ತಿದೆ. ಶಾಲಾ ಭೂಮಿಯ ಅತಿಕ್ರಮಣ ಮತ್ತು ಕಟ್ಟಡದ ಉದ್ಘಾಟನೆಯ ವಿಳಂಬದ ಬಗ್ಗೆ  ಕಾನೂನು ಹೋರಾಟಗಳಿಗೆ ಸಾರ್ವಜನಿಕರು ತೊಡಗಿಕೊಳ್ಳುತ್ತಿರುವಂತೆ ಎರಡು ಕಟ್ಟಡಗಳನ್ನು ಉದ್ಘಾಟಿಸಿ  ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಲಾ ಪಿಟಿಎ ಈಗ ಆಸಕ್ತಿ ವಹಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.
      ಅತಿಕ್ರಮಣಕಾರರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಿರಿಯಾ ಅಭಿವೃದ್ಧಿ ಸಮಿತಿ ಅಧಿಕಾರಿಗಳು ಕರೆ ನೀಡಿದ್ದಾರೆ. ಅತಿಕ್ರಮಣ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ವಿಷಯದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಕ್ರಿಯಾ ಸಮಿತಿಯನ್ನು ರಚಿಸಿ ಮುಷ್ಕರವನ್ನು ನಡೆಸಲು ನಿರ್ಧರಿಸಲಾಗಿದೆ ಎಮದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
      ಸುದ್ದಿಗೋಷ್ಠಿಯಲ್ಲಿ ಶಿರಿಯ  ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ. ಅಬ್ಬಾಸ್ ವಾನಂದೆ, ಸತ್ತಾರ್ ವಳಯಂ ಮತ್ತು ಜಿ.ಎ. ಮೊಯ್ದೀನ್ ಶಿರಿಯಾ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries