ಕಾಸರಗೋಡು: ಭಾರತೀಯ ಜನತಾ ಪಕ್ಷದ ಕಾಸರಗೋಡು ನಗರ ಸಮಿತಿ ಸಭೆಯು ಜರಗಿತು. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಆವಿಷ್ಕರಿಸಿದ ಜನೋಪಕಾರವಾದ ಎಲ್ಲಾ ಯೋಜನೆಗಳನ್ನು ಜನ ಸಾಮಾನ್ಯರಿಗೆ ಯಥಾ ಸಮಯಕ್ಕೆ ಅತ್ಯಂತ ಫಲಪ್ರದವಾಗಿ ತಲುಪಿಸಲು ನಗರ ಸಮಿತಿಯ ನೇತೃತ್ವದಲ್ಲಿರುವ ಬಿಜೆಪಿ ಜನಸೇವನ ಕೇಂದ್ರವನ್ನು ಮತ್ತಷ್ಟು ಅತ್ಯಾಧುನಿಕವಾಗಿ ಮಾರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಬಿಜೆಪಿ ನೇತಾರರಾದ ನ್ಯಾಯವಾದಿ ಸದಾನಂದ ರೈ, ಎನ್.ಸತೀಶ್, ರವೀಂದ್ರ ಕರಂದಕ್ಕಾಡು, ಅರುಣ್ ಕುಮಾರ್ ಶೆಟ್ಟಿ, ಉಮಾ ಕಡಪ್ಪುರ, ಪಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.


