ಕುಂಬಳೆ: ರಾಷ್ಟ್ರೀಯ ಹೆದ್ದಾರಿ ತಲಪಾಡಿಯಿಂದ ನೀಲೇಶ್ವರ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಮತ್ತೆ ಜೀವ ಬಂದಿದೆ. ಜುಲೈ 31ರ ಮುಂಚಿತ ಭೂಸ್ವಾಧೀನ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಿದೆ.
ಎ.31ರ ಮುಂಚಿತ ಸ್ಥಳ ವಶಪಡಿಸುವ ಪ್ರಕ್ರಿಯೆ ಪೂರ್ತಿಗೊಳಿಸಲು ತೀರ್ಮಾನಿಸಿದ್ದು, ಆ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಪ್ರಥಮ ಹಂತದಲ್ಲಿ ತಲಪಾಡಿಯಿಂದ ಚೆಂಗಳದವರೆಗೂ, ಚೆಂಗಳದಿಂದ ನೀಲೇಶ್ವರ ವರೆಗೂ ಕಾಮಗಾರಿ ಆರಂಭಿಸಲಾಗುವುದು.
ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಈ ಹೊಣೆ ವಹಿಸಿಕೊಂಡಿದ್ದ ಕಂದಾಯ ನೌಕರರನ್ನು ಕೋವಿಡ್ ಪ್ರತಿರೋಧ ಕೆಲಸಗಳಿಂದ ಹೊರತುಪಡಿಸಲಾಗುವುದು. ಎನ್.ಎಚ್. 66ರಲ್ಲಿ ಸ್ಟಾಂಡಿಂಗ್ ಫಿನಾನ್ಸ್ ಸಮಿತಿ ಅಂಗೀಕರಿಸಿದ ಎರಡು ರೀಚ್‍ಗಳಲ್ಲಿ ಜುಲೈ ಬಳಿಕ ನಿರ್ಮಾಣ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಡೆಪ್ಯೂಟಿ ಕಲೆಕ್ಟರ್‍ರ ನೇತೃತ್ವದಲ್ಲಿರುವ ಅ„ಕಾರಿಗಳು ಭೂಮಿ ಸಂಬಂಧವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೆ ವೇಗ ಹೆಚ್ಚಿಸಲು ಇತ್ತೀಚೆಗೆ ಸೇರಿದ ಅವಲೋಕನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಇತರ ರಾಜ್ಯಗಳಿಗಿಂತ ಭೂಮಿ ಬೆಲೆ ಹೆಚ್ಚಾಗಿರುವುದು ಅಭಿವೃದ್ಧಿ ವಿಳಂಬವಾಗಲು ಕಾರಣವಾಗಿದೆ. ಇದರಿಂದ ಭೂಮಿಯ ಬೆಲೆಯಲ್ಲಿ ಶೇ.25 ರಾಜ್ಯ ಸರಕಾರ ನೀಡುವುದಾಗಿ ಒಪ್ಪಿತ್ತು. ಭಾರತ್ ಮಾಲಾ ಯೋಜನೆಯ ಅಂಗವಾಗಿ ಹೈಬ್ರೀಡ್ ಅನ್ಯೂಟಿಮೋಡ್‍ನಲ್ಲಿ ಎರಡು ವರ್ಷದಲ್ಲಿ ನಿರ್ಮಾಣ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ.
ತಲಪಾಡಿಯಿಂದ ಚೆಂಗಳ ವರೆಗಿನ ಭೂಮಿ ವಶದಂಗವಾಗಿರುವ ದೂರು ಪರಿಹಾರ, ಹಣ ನೀಡುವುದಕ್ಕಿರುವ 3ಜಿ, 3ಎಚ್ ಕ್ರಮಗಳು ಉಳಿದಿವೆ. ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲೂ ಈ ಕೆಲಸವನ್ನು ತ್ವರಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ.


