ಬದಿಯಡ್ಕ: ಕುಂಬ್ಡಾಜೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕ್ಷೀರೋತ್ಪಾದಕ ಸಹಕಾರಿ ಸಂಘ ಗುರುವಾರ ಲೋಕಾರ್ಪಣೆಗೊಂಡಿತು.
ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಎಸ್.ಮೊಹಮ್ಮದ್ ಕುಂಞÂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಫಾತಿಮತ್ ಸುಹರಾ ಉದ್ಘಾಟಿಸಿ ಶುಭಹಾರೈಸಿದರು. ಮಿಲ್ಮಾ ವಿಭಾಗೀಯ ನಿರ್ದೇಶಕ ವಿ.ವಿ. ನಾರಾಯಣನ್ ಅವರು ಮೊದಲ ಹಾರಿನ ಖರೀದಿ ನಿರ್ವಹಿಸಿದರು. ಕಾಂಞಂಗಾಡ್ ವಲಯ ನಿರ್ದೇಶಕ ಕೆ.ಸುಧಾಕರನ್ ಅವರು ಸಹಕಾರಿ ಸಂಘದ ರಿಜಿಸ್ಟರ್ ಮತ್ತು ಉಪಕರಣಗಳ ವಿತರಣೆಗೆ ಚಾಲನೆ ನೀಡಿದರು.
ಗ್ರಾ.ಪಂ. ಸದಸ್ಯ ಬಿ.ಟಿ.ಅಬ್ದುಲ್ಲ ಕುಂಞÂ, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಸಿದ್ದೀಕ್ ಖಂಡಿಗೆ ಉಪಸ್ಥಿತರಿದ್ದು ಶುಭಹಾರೈಸಿದರು. ಹಾಲಿನ ಗುಣಮಟ್ಟದ ಪರಿಶೋಧನೆಯನ್ನು ಕ್ಷೀರ ವಿಕಸನ ಸಮಿತಿಯ ಗುಣಮಟ್ಟ ಪರಿಶೋಧನಾ ಅಧಿಕಾರಿ ಮಹೇಶ್ ನಾರಾಯಣ,ಕಾಂಞಗಾಡ್ ಮಿಲ್ಮಾ ವಿಭಾಗದ ಸಹಾಯಕ ಪ್ರಬಂಧಕ ಕೆ.ಅಜಿತ್ ಕುಮಾರ್ ಅವರು ಕಾರಡ್ಕ ವಲಯಾಧಿಕಾರಿ ಜಾಸ್ಮಿನ್ ಸಿ.ಎ. ಉಪಸ್ಥಿತರಿದ್ದು ಶುಭಹಾರೈಸಿದರು. ಕುಂಬ್ಡಾಜೆ ಕ್ಷೀರೋತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಡಾ.ವೇಣುಗೋಪಾಲ ಕಳೆಯತ್ತೋಡಿ ಸ್ವಾಗತಿಸಿ, ಅಧ್ಯಕ್ಷ ಫಾರೂಕ್ ಎಂ. ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು, ಹಾಲುತ್ಪಾದಕ ಕೃಷಿಕರು, ಸ್ಥಳೀಯರು ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಪಾಲ್ಗೊಂಡಿದ್ದರು.


