ಉಪ್ಪಳ: ಉಪ್ಪಳ ಚೆರುಗೋಳಿ ಶಾಲೆಯಲ್ಲಿ ವ್ಯವಸ್ಥೆಗೊಳಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಯುವಕನೊಂದಿಗೆ ಪ್ರೇಮವೇಪ್ಟ್ಟು ಪರಾರಿಯಾದ ಘಟನೆ ನಡೆದಿದೆ.
ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಆರಂಭಿಸಿದ ಸಾಮಾಜಿಕ ಸುರಕ್ಷಾ ಕೇಂದ್ರಗಳಲ್ಲಿ ಒಂದಾಗಿರುವ ಉಪ್ಪಳ ಚೆರುಗೋಳಿಯ ಮಂಗಲ್ಪಾಡಿ ಪಂಚಾಯತಿ ಸಾಮಾಜಿಕ ಸುರಕ್ಷಾ ಕೇಂದ್ರದಲ್ಲಿದ್ದ ಆಂಧ್ರಪ್ರದೇಶ ನಿವಾಸಿಯಾದ 12ರ ಬಾಲಕಿ ಮತ್ತು ತಮಿಳುನಾಡ ನಿವಾಸಿ 21ರ ಹರೆಯದ ಯುವಕ ಪರಸ್ಪರ ಪ್ರೇಮಾನುಕ್ತರಾಗಿ ಪರಾರಿಯಾದರು. ಇಬರಿಬ್ಬರ ಕುಟುಂಬಗಳೂ ಅಲೆಮಾರಿಗಳಾಗಿದ್ದು ಗುಜರಿ ಹೆಕ್ಕಿ ಜೀವನ ಸಾಗಿಸುವವರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಶ್ರಮದಿಂದ ಕೋವಿಡ್ ಹಿನ್ನೆಲೆಯಲ್ಲಿ ಕೊರೊನಾದಿಂದ ಸಂರಕ್ಷಿಸಲು ಸಾಮಾಜಿಕ ಸುರಕ್ಷಾ ಕೇಂದ್ರದಲ್ಲಿ ಇವರಿಗೆ ವಸತಿ ಸೌಕರ್ಯ ಏರ್ಪಡಿಸಲಾಗಿತ್ತು.
ಈ ಮಧ್ಯೆ ಇವರ ವಸತಿಯಲ್ಲಿ ಜೀವನ ಆರಂಭಿಸಿ ಸ್ವಲ್ಪ ಕಾಲದಲ್ಲೇ ಇವರಿಬ್ಬರ ಮಧ್ಯೆ ಅಗಲಲಾರದ ಸಾಮೀಪ್ಯತೆ ಕಂಡುಬಂತು. ಈ ವಿಷಯ ಸಾಮಾಜಿಕ ಸುರಕ್ಷ ಕೇಂದ್ರದಲ್ಲಿ ಇವರಿಬ್ಬರ ಪ್ರೇಮ ಬಹಿರಂಗಗೊಂಡು ಲೈಲಾ-ಮಂಜು ಎಂದೇ ಕರೆಯಲ್ಪಡುತ್ತಿದ್ದರು. ಈ ಮಧ್ಯೆ ಜೋಡಿಗಳು ಗುರುವಾರ ಬೆಳಿಗ್ಗೆ ಪರಾರಿಯಾದರು.
ಬಳಿಕ ಪೋಲೀಸರಿಗೆ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದರು. ಪ್ರಕರಣದ ತನಿಖೆ ನಡೆಸಲಾಯಿತು. ಇವರಿಬ್ಬರು ಪ್ರೇಮದಲ್ಲಿದ್ದು ಪರಾರಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಶಾಲೆಯಲ್ಲಿ ಇತರರ ಹೇಳಿಕೆಗಳನ್ನು ಪೆÇಲೀಸರು ದಾಖಲಿಸಿದ್ದಾರೆ. ಅವರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಆದರೆ ಬಾಲಕಿ ಅಪ್ರಾಪ್ತೆಯಾಗಿರುವುದು ಮತ್ತು ಕೋವಿಡ್ ನಿಯಮಗಳನ್ನು ತೂರಿ ಕ್ವಾರಂಟೈನ್ ಉಲ್ಲಂಘಿಸಿರುವುದರಿಂದ ಘಟನೆಯ ಬಗ್ಗೆ ಮಂಜೇಶ್ವರ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


