ತೃಶೂರ್: ರಾಜ್ಯದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಜೂನ್ 13ರಿಂದ ಭಕ್ತಾದಿಗಳಿಗೆ ಮತ್ತೆ ಪ್ರವೇಶ ನಿಷೇಧಿಸಲಾಗಿದೆ. ತೃಶ್ಯೂರ್ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಕೋವಿಡ್-19 ರೋಗಬಾಧೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ. ದೇವಸ್ಥಾನ ಸಮಿತಿ ತೀರ್ಮಾನದನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ದೇವಸ್ಥಾನದಲ್ಲಿ ನಿತ್ಯ ನೈಮಿತ್ತಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಜೂನ್ 13ರಂದು ಆಯೋಜಿಸಲಾಗಿರುವ ಎರಡು ಜೋಡಿ ವಿವಾಹವೂ ಯಥಾಪ್ರಕಾರ ನಡೆಯಲಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಹಿಂದೂ ಐಕ್ಯವೇದಿ ಸಹಿತ ಕೇರಳದ ವಿವಿಧ ಹಿಂದೂಪರ ಸಂಘಟನೆಗಳ ಪ್ರತಿಭಟನೆಯ ನಡುವೆಯೂ ದೇವಸ್ಥಾನಗಳನ್ನು ಕೇರಳ ಸರ್ಕಾರ ತೆರೆದುಕಾರ್ಯಾಚರಿಸುವಂತೆ ಮಾಡಿತ್ತು. ಲಾಕ್‍ಡೌನ್ ವಿನಾಯಿತಿಯನ್ವಯ ಜೂನ್ 9ರಿಂದ ದೇವಸ್ಥಾನ ಭಕ್ತಾದಿಗಳಿಗೆ ದರ್ಶನಕ್ಕಾಗಿ ತೆರೆದುಕೊಂಡಿತ್ತು.
ಕೋವಿಡ್ ಭೀತಿ-ಮತ್ತೆ ಮುಚ್ಚಿದ ಗುರುವಾಯೂರು ದೇವಸ್ಥಾನ
0
ಜೂನ್ 12, 2020