HEALTH TIPS

ಇ-ಚೆಲನ್ ವ್ಯವಸ್ಥೆಗೆ ಹೆಜ್ಜೆ ಹಾಕಿದ ಮೋಟಾರು ವಾಹನ ಇಲಾಖೆ


      ತಿರುವನಂತಪುರಂ: ವಾಹನ್, ಸಾರಥಿ ಎಂಬ ಆನ್ ಲೈನ್ ವ್ಯವಸ್ಥೆಗಳೊಂದಿಗೆ ರಸ್ತೆಗಳಲ್ಲಿ ವಾಹನಗಳ ಪರಿಶೋಧನೆಗೂ ಕೇಂದ್ರೀಕೃತ ಆನ್ ಲೈನ್ ತಂತ್ರಜ್ಞಾನಕ್ಕೆ ಮೋಟಾರು ವಾಹನ ಇಲಾಖೆ ಸಿದ್ದಗೊಳ್ಳುತ್ತಿದೆ.
    ದಶಕಗಳಿಂದಲೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಆರೋಪಗಳನ್ನು ಸಲ್ಲಿಸಲು ಕಾಗದ ಮತ್ತು ಪೆನ್ನು ಬಳಸುತ್ತಿದ್ದ ಮೋಟಾರು ವಾಹನ ಇಲಾಖೆ, ಮುಂದಿನ ದಿನಗಳಲ್ಲಿ ಸಂಪೂರ್ಣ ಪ್ರಮಾಣದಲ್ಲಿ ನೂತನ ತಂತ್ರಜ್ಞಾನದ ಆನ್ ಲೈನ್ ವ್ಯವಸ್ಥೆಗೆ ಚಾಲನೆ ನೀಡಲಿದೆ. ಪ್ರಪಂಚ ಪ್ರಸ್ತುತ ಸೋಂಕು ಪೀಡೆಯ ಕಪಿಮುಷ್ಠಿಯಲ್ಲಿ ನಲುಗಿ ಲಾಕ್ ಡೌನ್ ಗೊಳಪಟ್ಟಿರುವಾಗ  ವಾಹನ ಅಪಘಾತಗಳು ಅಮೂಲ್ಯ ಜೀವಗಳನ್ನು ಕಸಿದುಕೊಳ್ಳುತ್ತಿರುವುದೂ ಕಳವಳಕಾರಿಯಾಗುತ್ತಿದೆ. ಆದ್ದರಿಂದ, ಕೋವಿಡಿ ಮಾನದಂಡಗಳನ್ನು ಪೂರೈಸುವ ರೀತಿಯಲ್ಲಿ ಆನ್ ಲೈನ್ ತಂತ್ರಜ್ಞಾನವನ್ನು ಗರಿಷ್ಠ ಬಳಸಿ ಎನ್ಪೋರ್ಸ್‍ಮೆಂಟ್ ವ್ಯವಸ್ಥೆಯನ್ನು ಒದಗಿಸುವ ಮಹತ್ತರ ಲಕ್ಷ್ಯದೊಂದಿಗೆ ಇ-ಚಾನೆಲ್ ಮೂಲಕ ನೂತನ ವ್ಯವಸ್ಥೆ ಜಾರಿಗೊಳ್ಳಲಿದೆ.
      ಸಂಪೂರ್ಣ ವೆಬ್ ಆಧಾರಿತ ವ್ಯವಸ್ಥೆಯು ವಾಹನ ಪರಿಶೀಲನಾ ಅಧಿಕಾರಿಗಳಿಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾನೂನು ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ವೆಬ್ ಇಂಟರ್ಫೇಸ್ ಸೌಲಭ್ಯವು ಇದೀಗ ಸಿದ್ಧವಾಗಿದೆ. ಇದು ಇಚಲನ್.ಪರಿವಾಹನ್.ಜಿಒವಿ.ಇನ್ ಎಂಬ ಜಾಲತಾಣ ಮುಖೇನ ಸಂಘಟಿಸಲಾಗುತ್ತಿದೆ. ದೋಷಾರೋಪಣೆ ಸಲ್ಲಿಸಿದ ವಿವರಗಳು, ಆರೋಪಿ, ದಾಖಲೆಪತ್ರಗಳ ಮಾಹಿತಿ ತಕ್ಷಣ ಆನ್‍ಲೈನ್‍ನಲ್ಲಿ ಲಭ್ಯವಾಗಲಿದೆ.  ಇದರಿಂದ ಯಾವುದೇ ವಾಹನಗಳ, ಚಾಲಕನ ಮತ್ತು ವಾಹನ ದಾಖಲೆಗಳ ಕಾನೂನು ಉಲ್ಲಂಘನೆ ಯಾವಾಗೆಲ, ಹೇಗೆಲ್ಲ ನಡೆದಿದೆ ಎಂಬಿತ್ಯಾದಿ ಮಾಹಿತಿಗಳು ಅತಿ ಸುಲಭವಾಗಿ ತಿಳಿಯಬಹುದಾಗಿದೆ.
             ಎರ್ನಾಕುಲಂನಲ್ಲಿ ಮೊದಲ ಪ್ರಯೋಗ:
     ರಾಜ್ಯದ ಮೋಟಾರು ವಾಹನ ಇಲಾಖೆಯ ಜಾರಿ ವಿಭಾಗವು ಇ-ಚೆಲನ್ ವ್ಯವಸ್ಥೆಯ ಮೂಲಕ ಸಂಪೂರ್ಣ ಮತ್ತು ಸಮಗ್ರ ಡಿಜಿಟಲ್ ವ್ಯವಸ್ಥೆಯನ್ನು ಪ್ರವೇಶಿಸಿದೆ. ಇ-ಚೆಲನ್ ಸೌಲಭ್ಯವನ್ನು ಎರ್ನಾಕುಳಂ ಪ್ರಾದೇಶಿಕ ಸಾರಿಗೆ ಕಚೇರಿಯಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅಳವಡಿಸಿದೆ. ಇದರ ವಿಶೇಷತೆಯೆಂದರೆ ಅಪರಾಧಿಯು ಅಪರಾಧದ ವಿವರಗಳು, ದಂಡಗಳು ಮತ್ತು ಅಪರಾಧದ ವಿವರಗಳನ್ನು ತಕ್ಷಣ ಮುದ್ರಿಸುತ್ತದೆ.
      ಕೇಂದ್ರೀಕೃತ ವ್ಯವಸ್ಥೆ:
   ನೂತನ ವ್ಯವಸ್ಥೆಯಲ್ಲಿ ಆಂಡ್ರಾಯ್ಡ್ ತಂತ್ರಜ್ಞಾನವನ್ನು ಆಧರಿಸಿ ರಚಿಸಲಾಗಿದೆ. ತಪಾಸಣೆಯ ಸಮಯದಲ್ಲಿ ಫೆÇೀಟೋವನ್ನು ಸಾಕ್ಷಿಯಾಗಿ ಸಂಗ್ರಹಿಸುವ ಸಾಮಥ್ರ್ಯ ಹೊಂದಿರುತ್ತದೆ. ಇ-ಚೆಲನ್ ವ್ಯವಸ್ಥೆಯನ್ನು ಮೋಟಾರು ವಾಹನ ಇಲಾಖೆಯ ರಾಷ್ಟ್ರವ್ಯಾಪಿ ಕೇಂದ್ರೀಕೃತ ವ್ಯವಸ್ಥೆಯಾದ ವಾಹನ್ ಸಾಫ್ಟ್ ವೇರ್‍ಗೆ ಜೋಡಿಸಲಾಗಿದೆ. ಅಪರಾಧದಲ್ಲಿ ಭಾಗಿಯಾಗಿರುವ ವಾಹನವನ್ನು ವಾಹನ ವ್ಯವಸ್ಥೆಯಿಂದ ಕಪ್ಪುಪಟ್ಟಿಗೆ ಸೇರಿಸಲು ಇದು ಅನುವು ಮಾಡಿಕೊಡುತ್ತದೆ.
         ವರ್ಚುವಲ್ ಕೋರ್ಟ್ ಸುಲಭ:
     ಇ-ಚೆಲನ್ ವ್ಯವಸ್ಥೆಯು ಕಾನೂನನ್ನು ಉಲ್ಲಂಘಿಸುವವರನ್ನು ವರ್ಚುವಲ್ ನ್ಯಾಯಾಲಯದ ಮುಂದೆ ತರಲು ನೆರವಾಗುತ್ತದೆ. ಫೆಡರಲ್ ಬ್ಯಾಂಕ್ ಸಹಯೋಗದೊಂದಿಗೆ ಈ ಯೋಜನೆಯನ್ನು ಎರ್ನಾಕುಳಂ ಜಿಲ್ಲೆಯಲ್ಲಿ ಜಾರಿಗೊಳಿಸಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಬಾಬು ಜಾನ್ ಇ ಚೆಲನ್ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ. ಮನೋಜ್ ಕುಮಾರ್, ಜಿ.ಎಸ್. ಮತ್ತು ಅನಂತಕೃಷ್ಣನ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries