ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸಂಕಷ್ಟವನ್ನೂ ಲೆಕ್ಕಿಸದೆ ವಿದ್ಯುತ್ ಇಲಾಖೆ ಗ್ರಾಹಕರಿಗೆ ಕರುಣೆ ತೋರಿಸುತ್ತಿಲ್ಲ. ವಿದ್ಯುತ್ ಸುಂಕ ಹೆಚ್ಚಳ ವಿರುದ್ಧದ ಆಂದೋಲನಕ್ಕೆ ಯುಡಿಎಫ್ ನಿರ್ಧರಿಸಿದೆ ಎಂದು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ಶುಕ್ರವಾರ ತಿರುವನಂತಪುರಂನಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ಸರ್ಕಾರದ ವಿರುದ್ದ ಜನಾಂದೋಲನ ಸಂಘಟಿಸಲು ಜೂ.17 ರಂದು ಸಂಜೆ 3 ನಿಮಿಷ ಬಲ್ಬ್ ಗಳನ್ನು ಆರಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಲಾಗುವುದೆಂದು ಚೆನ್ನಿತ್ತಲ ತಿಳಿಸಿರುವರು.
ಕೆ ಎಸ್ ಇ ಬಿ ಯು ಅತಿಯಾದ ವಿದ್ಯುತ್ ಬಿಲ್ ವಿಧಿಸುವ ಮೂಲಕ ಜನರನ್ನು ದೋಚುವ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಲು ಯುಡಿಎಫ್ ನಿರ್ಧರಿಸಿದೆ. ವಿದ್ಯುತ್ ದರ ಹೆಚ್ಚಳಕ್ಕೆ ವಿರುದ್ಧ ಆಂದೋಲನ ಕೈಗೊಳ್ಳುವ ಮೂಲಕ ನ್ಯಾಯದೊರಕಿಸಲು ಯತ್ನಿಸುವುದಾಗಿ ತಿಳಿಸಿದೆ.
ಕೋವಿಡ್ 19 ರ ಹರಡುವಿಕೆಯಿಂದ ಕೇರಳದ ಜನರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವಾಗ ಕೆಎಸ್‍ಇಬಿಯು ಅತಿಯಾದ ಬಿಲ್ ನೀಡುವ ಮೂಲಕ ಲೂಟಿ ಮಾಡಲು ಯತ್ನಿಸುತ್ತಿದ್ದು ಇದು ಒಪ್ಪಿಕೊಳ್ಳಲು ಸಾಧ್ಯವಾಗದು ಎಂದು ಚೆನ್ನಿತ್ತಲ ಹೇಳಿದರು.
ಜನರಿಗೆ ಬಿಲ್ ನೀಡುವ ಸರ್ಕಾರದ ವಿರುದ್ಧ ನೀವು ಛಿhಚಿಟಿge.oಡಿg ವೆಬ್‍ಸೈಟ್‍ನಲ್ಲಿ ಆನ್‍ಲೈನ್‍ನಲ್ಲಿ ದೂರು ಸಲ್ಲಿಸಬಹುದು. ವೆಬ್‍ಸೈಟ್‍ನಲ್ಲಿ ನೀಡಿದ ದೂರುಗಳನ್ನು ಪರಿಗಣಿಸಿದ ನಂತರ ಈ ವಿಷಯವನ್ನು ಪ್ರಚಾರ ಅಭಿಯಾನವನ್ನಾಗಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಲೂಟಿಯನ್ನು ಕೊನೆಗೊಳಿಸಲು ಆನ್‍ಲೈನ್ ಅಭಿಯಾನವನ್ನು ಪ್ರಾರಂಭಿಸಲು ಯುಡಿಎಫ್ ನಿರ್ಧರಿಸಿದೆ. ಇಂದಿನಿಂದ ಚೇಂಜ್.ಆರ್ಗ್ ವೆಬ್‍ಸೈಟ್‍ನಲ್ಲಿ ದೂರು ನೀಡಬಹುದು ಎಂದು ಚೆನ್ನಿತ್ತಲ ಹೇಳಿದರು.
ಸರ್ಕಾರದ ಯಾವುದೇ ಎಚ್ಚರಿಕೆ ನೀಡದೆ ವಿದ್ಯುತ್ ಬಿಲ್ ಹೆಚ್ಚಿಸಿದೆ. ಕೋವಿಡ್ ಲಾಕ್ ಡೌನ್ ವೇಳೆ ಮೀಟರ್ ರೀಡಿಂಗ್ ಸಾಧ್ಯವಾಗಿರಲಿಲ್ಲ. ಆದರೆ ಈಗ ಅದನ್ನು ಸಾಮಾನ್ಯ ಜನರ ಮೇಲೆ ಹೇರುವ ಯತ್ನವನ್ನು ವಿದ್ಯುತ್ ಇಲಾಖೆ ಮಾಡುತ್ತಿದೆ. ಸರ್ಕಾರ ಈ ಬಗ್ಗೆ ನಿಷ್ಕರುಣಿಯಾಗಿದೆ. ಗ್ರಾಹಕರಿಗೆ ಸರ್ಕಾರದ ಕ್ರೌರ್ಯವನ್ನು ಸಹಿಸಲಾಗುವುದಿಲ್ಲ ಎಂದು ಚೆನ್ನಿತ್ತಲ ಹೇಳಿದರು.
ಅನೇಕ ಬೃಹತ್ ಕಂಪೆನಿಗಳು ಲಾಕ್ ಡೌನ್ ಕಾರಣ ಕಾರ್ಯವೆಸಗಲಾಗಿಲ್ಲ. ಇದೀಗ ಬಂದಿರುವ ಬಿಲ್ ಅನೇಕ ಕಂಪನಿಗಳಿಗೆ ದೊಡ್ಡ ವೆಚ್ಚದಲ್ಲಿ ಬಂದಿದೆ. ಕೋವಿಡ್ ಅವಧಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ತಮ್ಮ ವಿದ್ಯುತ್ ಬಿಲ್ ಪಾವತಿಸಬಾರದು ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಸರ್ಕಾರ ಇದನ್ನು ಪಾಲಿಸಿಲ್ಲ ಎಂದು ಚೆನ್ನಿತ್ತಲ ಹರಿಹಾಯ್ದರು.


