ಕಾಸರಗೋಡು: ವಿದ್ಯುತ್ ದರ ಹೆಚ್ಚಳವನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಪಿಲಿಕುಂಜೆಯಲ್ಲಿರುವ ಕೆಎಸ್‍ಇಬಿ ಎಕ್ಸಿಕ್ಯೂಟೀವ್ ಎಂಜಿನಿಯರ್ ಕಚೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು.
ಮುಸ್ಲಿಂ ಲೀಗ್ ಕೇರಳ ರಾಜ್ಯ ಕೋಶಾ„ಕಾರಿ ಸಿ.ಟಿ.ಅಹಮ್ಮದಲಿ ಉದ್ಘಾಟಿಸಿದರು. ಅಧ್ಯಕ್ಷ ಎ.ಎಂ.ಕಡವತ್ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು, ಪಿ.ಎಂ.ಮುನೀರ್ ಹಾಜಿ, ಮೂಸಾ ಬಿ.ಚೆರ್ಕಳ, ಮಾಹಿನ್ ಕೇಳೋಟ್, ಅಬ್ಬಾಸ್ ಬೇಗಂ, ಹಾಶೀಂ ಕಡವತ್, ಟಿ.ಎಂ.ಇಕ್ಬಾಲ್, ಎ.ಎ.ಜಲೀಲ್, ಅಶ್ರಫ್ ಎಡನೀರು, ಬಿಫಾತಿಮ ಇಬ್ರಾಹಿಂ, ನ್ಯಾಯವಾದಿ ವಿ.ಎಂ.ಮುನೀರ್, ಖಾಲೀದ್ ಪಚ್ಚಕ್ಕಾಡ್, ಹಾರೀಸ್ ಬೆದಿರ, ಬಶೀರ್, ಎ.ಎ.ಅಸೀಸ್, ಅಜ್ಮಲ್ ತಳಂಗರೆ, ನೌಫಲ್ ತಾಯಲಂಗಾಡಿ, ರಫೀಕ್ ವಿದ್ಯಾನಗರ, ಫಿರೋಜ್ ಅಡ್ಕತ್ತಬೈಲು ಮೊದಲಾದವರು ನೇತೃತ್ವ ನೀಡಿದರು. ಕೆ.ಅಬ್ದುಲ್ಲ ಕುಂಞÂ ಚೆರ್ಕಳ ಸ್ವಾಗತಿಸಿದರು.

