ಕಾಸರಗೋಡು: ಮಳೆನೀರು ಸಂರಕ್ಷಣೆಗಾಗಿ ಜಿಲ್ಲಾ ಕಾರಾಗೃಹದ ವ್ಯಾಪ್ತಿಯಲ್ಲಿ ಜಲ ಮರುಪೂರಣ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮೂಲಕ ಖೈದಿಗಳ ಹಾಗೂ ಇತರರ ಮೂಲ ಅಗತ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ಬಾವಿ ಜಲ ಮರುಪೂರಣ ಘಟಕವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾ„ಕಾರಿ ಇ.ವಿ.ರಾಜ್‍ಮೋಹನ್ ಉದ್ಘಾಟಿಸಿದರು. ಕಾರಾಗೃಹ ಮೇಲ್ವಿಚಾರಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು.
ಹಸಿರು ಕೇರಳ ಮಿಶನ್ ಜಿಲ್ಲಾ ಸಂಚಾಲಕ ಎಂ.ವಿ.ಸುಬ್ರಹ್ಮಣ್ಯನ್, ಅಂತರ್ಜಲ ವಿಭಾಗ ಜಿಲ್ಲಾ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಒ.ರತೀಶ್, ಪ್ರವೀಣ್, ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಗಳಾದ ವಿ.ಗೋಪಾಲಕೃಷ್ಣನ್, ವಸಂತಕುಮಾರ್ ಉಪಸ್ಥಿತರಿದ್ದರು.

