ಕಾಸರಗೋಡು: ಕುಡಿಯುವ ನೀರನ್ನು ಕೈ ಬಳಸದೇ ಬಳಸಬಲ್ಲ(ಟಚ್ ಲೆಸ್) ಡಿಸ್ಪನ್ಸರ್ ಸಂಶೋಧಿಸಲಾಗಿದ್ದು, ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಕೊಡುಗೆಯಾಗಿ ನೀಡಲಾಗಿದೆ.
ಚೆರ್ಕಳ ನಿವಾಸಿ ಶಿಫಾರತ್ ರೋಷನ್ ಈ ಸಂಶೋಧನೆ ನಡೆಸಿದವರು. ಇವರು ಎರ್ನಾಕುಲಂ ಕುನ್ನುಕರ ಎಂ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರಿಗೆ ಡಿಸ್ಪೆನ್ಸರ್ ಹಸ್ತಾಂತರಿಸಲಾಗಿದೆ.
ಫೆÇೀಟೋ ಶೀರ್ಷಿಕೆ: ಟಚ್ ಲೆಸ್ ವಾಟರ್ ಡಿಸ್ ಪೆನ್ಸರ್: ಜಿಲ್ಲಾಧಿಕಾರಿ ಕಚೇರಿಗೆ ನೀಡಲಾದ ಟಚ್ ಲೆಸ್ ವಾಟರ್ ಡಿಸ್ ಪೆನ್ಸನ್ರ್ನು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರಿಗೆ ಹಸ್ತಾಂತರಿಸಲಾಯಿತು.


