ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಪ್ರತಿನಿತ್ಯ ಸಂಜೆ ನಡೆಸುವ ಸುದ್ದಿಗೋಷ್ಠಿ ನಿನ್ನೆ ವಿಶೇಷತೆಗಳಿಗೆ ಸಾಕ್ಷಿಯಾಯಿತು.
ನಿಪ್ಪಾ ವೈರಸ್ ಬಾಧಿಸಿದ್ದ ಕಳೆದ ವರ್ಷ ನಿಧನರಾದ ದಾದಿ ಲೀನೆಯ ಕುಟುಂಬದವರನ್ನು ಕಾಂಗ್ರೆಸ್ಸ್ ಬೇಟೆಯಾಡುತ್ತಿದ್ದು, ರಾಜಕೀಯ ಕಾರಣಗಳಿಗೆ ಅವರ ಕುಟುಂಬವನ್ನು ಹಿಂಸಿಸಲುಯತ್ನಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್ಸ್ ವಿರುದ್ದ ಹರಿಹಾಯ್ದ ಘಟನೆ ನಡೆಯಿತು.
ಲೀನೆಯ ಕುಟುಂಬವನ್ನು ಇನ್ನಿಲ್ಲದಂತೆ ಬೇಟೆಯಾಡಬಾರದು, ಕೇರಳ ರಾಜ್ಯ ಲೀನೆಯ ಕುಟುಂಬದ ಜೊತೆ ಸದಾ ಇರಲಿದೆ ಎಂದು ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದರು.ಲೀನೆಯ ಪತಿ ಸಜೀಶ್ ಅವರು ಕಾರ್ಯನಿರ್ವಹಿಸುವ ಸಂಸ್ಥೆಗೆ ಕಾಂಗ್ರೆಸ್ಸ್ ನಡೆಸಿದ ಪ್ರತಿಭಟನಾ ಮೆರವಣಿಗೆ ಸಾಧುವಾದುದಲ್ಲ ಎಂದು ಪಿಣರಾಯಿ ತಿಳಿಸಿದರು.
ಸಾಮಾನ್ಯವಾಗಿ ಕೊರೊನಾ ಸಂಬಂಧಿ ಸುದ್ದಿಗೋಷ್ಠಿಯನ್ನು ಸರ್ಕಾರ ಈವರೆಗೆ ರಾಜಕೀಯ ಕೆಸರೆರಚಾಟಕ್ಕೆ ಬಳಸಿಲ್ಲ. ಆದರೆ ಕಳೆದ ಬಾರಿಯ ನಿಪ್ಪಾ ವೈರಸ ವಿರುದ್ದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಜೀವತೆತ್ತ ದಾದಿ ಲೀನೆಯ ಕುಟುಂಬದ ವಿರುದ್ದ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ಸ್ ಎಸಗುತ್ತಿರುವ ದ್ರೋಹವನ್ನು ಕಂಡೂ ಕಾಣದಂತಿರಲು ಸರ್ಕಾರಕ್ಕೆ ಸಾಧ್ಯವಿಲ್ಲ. ದಾದಿ ಲೀನ ಎಂದಿಗೂ ರಾಜ್ಯಕ್ಕೆ ಅಭಿಮಾನ ತಂದವರು. ಅವರ ಅನಿರೀಕ್ಷಿತ ಮರಣಕ್ಕೆ ಎಷ್ಟು ಬೆಲೆತೆತ್ತರೂ ನ್ಯಾಯದೊರಕಿಸಲಾಗದು. ನರ್ಸ್ ಲೀನಿ ಅವರ ಕುಟುಂಬ ಕೇರಳದ ಆಸ್ತಿ ಎಂದು ಮುಖ್ಯಮಂತ್ರಿ ಹೇಳಿದರು.


