HEALTH TIPS

ರಾಜ್ಯದಲ್ಲಿ ಮೂರು ಸಾವಿರ ಗಡಿ ದಾಟಿದ ಕೋವಿಡ್ ಬಾಧಿತರು-ಎಲ್ಲಾ ಜಿಲ್ಲೆಗಳ್ಲೂ ರೋಗ ಬಾಧಿತರು!

 
       ತಿರುವನಂತಪುರ: ರಾಜ್ಯದ ಕೋವಿಡ್ ರೋಗಿಗಳ ಸಂಖ್ಯೆ ಶನಿವಾರ ಸಂಜೆಗೆ ಮೂರು ಸಾವಿರವನ್ನು ಮೀರಿದೆ. ಕೋವಿಡ್ ನಿನ್ನೆ 127 ಜನರಲ್ಲಿ ದೃಢಪಟ್ಟಿದೆ. 57 ಮಂದಿಚಿಕಿತ್ಸೆಯಲ್ಲಿದ್ದವರು  ಗುಣಮುಖರಾದರು. ನಿನ್ನೆ ರೋಗನಿರ್ಣಯ ಮಾಡಿದ 127 ರೋಗಿಗಳಲ್ಲಿ 87 ಮಂದಿ ವಿದೇಶದಿಂದ ಬಂದವರು. 36 ಇತರ ರಾಜ್ಯಗಳಿಂದ ಬಂದವರು. ಇದರೊಂದಿಗೆ ಕೇರಳದಲ್ಲಿ 3039 ಬಾಧಿತರನ್ನು ಖಚಿತಪಡಿಸಲಾಗಿದೆ. 1450 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 139342 ಕ್ವಾರಂಟೈನ್ ಗೊಳಗಾಗಿದ್ದಾರೆ. ಒಟ್ಟು 258 ಜನರನ್ನು ನಿನ್ನೆಯೊಂದೇ ದಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 178559 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.
            ಒಟ್ಟು 4,817 ಮಾದರಿಗಳ ಪರಿಶೀಲನೆ:
    ನಿನ್ನೆಯ ವರೆಗೆ 4,817 ಮಾದರಿಗಳನ್ನು ಪರಿಶೀಲಿಸಲಾಗಿದೆ. ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 111 ಕ್ಕೆ ತಲುಪಿದೆ. ಸೆಂಟಿನೆಲ್ ಕ್ವಾರಂಟೈನ್ ಭಾಗವಾಗಿ, ಆದ್ಯತೆಯ ವಿಭಾಗದಿಂದ ಒಟ್ಟು 37,136 ಮಾದರಿಗಳನ್ನು ಸಂಗ್ರಹಿಸಲಾಗಿದೆ. 35,712 ಮಾದರಿಗಳು ನಕಾರಾತ್ಮಕವಾಗಿವೆ.
         ರಾಜ್ಯದಲ್ಲಿ 1,39,342 ಕ್ವಾರಂಟೈನ್:
    ಪ್ರಸ್ತುತ ರಾಜ್ಯದಲ್ಲಿ 1,450 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1,39,342 ಜನರನ್ನು ನಿಗಾದಲ್ಲಿಡಲಾಗಿದೆ. ಆಸ್ಪತ್ರೆಗಳಲ್ಲಿ 2,036 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಒಟ್ಟು 288 ಜನರನ್ನು ನಿನ್ನೆ ವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ 1,78,559 ಮಾದರಿಗಳನ್ನು ಪರಿಶೀಲಿಸಲಾಗಿದೆ. ಒಟ್ಟು 3,193 ಮಾದರಿಗಳನ್ನು ನಿರೀಕ್ಷಿಸಲಾಗಿದೆ. ನಿನ್ನೆಯ ಹೊತ್ತಿಗೆ, 1,32,569 ಜನರು ಪರೀಕ್ಷೆಯಲ್ಲಿದ್ದರೆ, 39,683 ಜನರು ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿದ್ದಾರೆ. ದ್ವಿತೀಯ ಸಂಪರ್ಕ ಪಟ್ಟಿಯಲ್ಲಿ 23,695 ಜನರಿದ್ದಾರೆ.
             35,327 ಜನರು ಉದ್ಯೋಗ ಕಳೆದುಕೊಂಡವರು:
     ಮೇ 7 ರಿಂದ ಇಲ್ಲಿಯವರೆಗೆ 401 ವಿಮಾನಗಳು ಮತ್ತು ಮೂರು ಹಡಗುಗಳು ಕೇರಳಕ್ಕೆ ಬಂದಿಳಿದಿವೆ. ಈ ಪೈಕಿ 225 ಚಾರ್ಟರ್ಡ್ ವಿಮಾನಗಳಾಗಿವೆ. ವಂದೇಭಾರತ್ ಕಾರ್ಯಾಚರಣೆಯ ಭಾಗವಾಗಿ 176 ವಿಮಾನಗಳು ಬಂದಿವೆ. ಕೇರಳಕ್ಕೆ ವಿದೇಶದಿಂದ ಒಟ್ಟು 71,958 ಜನರು ಬಂದಿರುವರು.  137 ಜನರು ರಾಜ್ಯದ ಹೊರಗಿನ ಇತರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕವೂ ಆಗಮಿಸಿದ್ದಾರೆ. ಇಲ್ಲಿಯವರೆಗೆ 124 ಒಪ್ಪಿಗೆ ಪತ್ರಗಳೊಂದಿಗೆ 1048 ವಿಮಾನಗಳನ್ನು ಅನುಮೋದಿಸಲಾಗಿದೆ. ಯುಎಇ ಯಿಂದ 154 ವಿಮಾನಗಳಲ್ಲಿ 28,114 ಜನರು ತಾಯ್ನಾಡಿಗೆ ಮರಳಿರುವವರು. ಕುವೈತ್ 60 ವಿಮಾನಗಳಲ್ಲಾಗಿ  10,439 ಮಂದಿ, ಒಮಾನ್ ನಿಂದ 50 ವಿಮಾನಗಳಲ್ಲಾಗಿ 8,707 ಜನರು, ಕತಾರ್ ನಿಂದ 36 ವಿಮಾನಗಳಲ್ಲಿ 6005 ಜನರು, ಬಹ್ರೇನ್ ನಿಂದ 26 ವಿಮಾನಗಳಲ್ಲಿ 4309 ಜನರು, ಸೌದಿ ಅರೇಬಿಯಾದಿಂದ 34 ವಿಮಾನಗಳಲ್ಲಾಗಿ 7190 ಮಂದಿಗಳು ಆಗಮಿಸಿದ್ದಾರೆ. ಅಲ್ಲದೆ ಇತರ ದೇಶಗಳಿಂದ 44 ವಿಮಾನಗಳಲ್ಲಿ 7,184 ಮಂದಿ ಕೇರಳಕ್ಕೆ ಮರಳಿದ್ದಾರೆ.  ಒಟ್ಟು ಆಗಮಿಸಿದ  71,958 ಮಂದಿಗಳಲ್ಲಿ 1524 ಹಿರಿಯ ನಾಗರಿಕರು, 4898 ಮಂದಿ ಗರ್ಭಿಣಿಯರು, 7193 ಮಂದಿ ಮಕ್ಕಳು ಒಳಗೊಂಡಿದ್ದಾರೆ.  35,327 ಮಂದಿ ಜನರೂ ಹೊರ ದೇಶದಿಂದ ಉದ್ಯೋಗ ಕಳೆದುಕೊಂಡು ರೋಗ ಭೀತಿಯ ಕಾರಣ ತಾಯ್ನಾಡಿಗೆ ಮರಳಿದವರಾಗಿದ್ದಾರೆ.
       ತಿರುವನಂತಪುರ ದಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗುವುದು:
     ತಿರುವನಂತಪುರದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.  ಈ ಬಗ್ಗೆ ವಿಶೇಷ ಗಮನ ಹರಿಸುವಂತೆ ಪೆÇಲೀಸರಿಗೆ ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಲ್ಲಿ ಜನರು ಗುಂಪುಗಳಾಗಿ ಜೊತೆಯಾಗುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲುಸೂಚಿಸಲಾಗಿದೆ. ಮೂರು ಗಸ್ತು ವಾಹನಗಳನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ರಾಜ್ಯದ ಇತರ ಭಾಗಗಳಲ್ಲಿ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೆÇಲೀಸರಿಗೆ ಸೂಚನೆ ನೀಡಲಾಗಿದೆ. ಕೆಲವು ವ್ಯಾಪಾರ ಮಳಿಗೆಗಳಲ್ಲಿ ಜನ ನಿಬಿಡತೆ ಕಂಡುಬರುತ್ತಿದ್ದು ವ್ಯಾಪಾರ ಕೇಂದ್ರಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries