ಕುಂಬಳೆ: ಕೊಯ್ಲು ಸಾಮಾಗ್ರಿಗಳ ವಿತರಣೆ ಮತ್ತು ಕೃಷಿಕ ಸಭೆ ಮೊಗ್ರಾಲ್ ಪುತ್ತೂರು ನೀರ್ಚಾಲ್ ನ ಬಿಲ್ಲಾರನ್ ತರವಾಡು ಬಯಲಿನಲ್ಲಿ ಸೋಮವಾರ ಜರಗಿತು.
ಯೋಜನೆಯ ಅಂಗವಾಗ ಇಲ್ಲಿ ಭತ್ತದ ಕೃಷಿ ಆರಂಭಿಸಲಾಗಿದೆ. ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ಕೃಷಿಭವನ ವತಿಯಿಂದ ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಈ ಕಾರ್ಯಕ್ರಮ ಜರುಗಿತು. ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಉದ್ಘಾಟಿಸಿದರು. ಸದಸ್ಯ ಅಬ್ದುಲ್ಲ ಕುಂuಟಿಜeಜಿiಟಿeಜ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮುಜೀಬ್ ಕಂಬಾರ್ ಕೊಯ್ಲು ಸಾಮಾಗ್ರಿಗಳ ವಿತರಣೆ ನಡೆಸಿದರು. ಸದಸ್ಯ ಎಸ್.ಎಚ್.ಹಮೀದ್, ಕೃಷಿ ಅಧಿಕಾರಿ ಚ್ಯವನ ನರಸಿಂಹಲು, ಗದ್ದೆ ಸಮಿತಿ ಪದಾಧಿಕಾರಿ ಅನಿಲ್ ಕುಮಾರ್ ನೀರ್ಚಾಲು ಉಪಸ್ಥಿತರಿದ್ದರು.


