ಕಾಸರಗೋಡು: ಯುವ ಜನರಿಗೆ ವಂಚನೆ ಕೊನೆಗೊಳಿಸಬೇಕು, ಪಿಎಸ್‍ಸಿ ರ್ಯಾಂಕ್ ಯಾದಿ ಕಾಲಾವಧಿಯನ್ನು ವಿಸ್ತರಿಸಬೇಕು, ಹಿಂಬಾಗಿಲ ನೇಮಕಾತಿಯನ್ನು ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಯುವಮೋರ್ಚಾ ನೇತೃತ್ವದಲ್ಲಿ ಕಾಸರಗೋಡು ಪಿ.ಎಸ್.ಸಿ. ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಧರಣಿ ಉದ್ಘಾಟಿಸಿ ಮಾತನಾಡಿದರು.

