ಬೆಂಗಳೂರು: ಕೊರೊನಾವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಪೀಡಿತರ ಚಿಕಿತ್ಸೆಗೆ ಮಾನದಂಡಗಳನ್ನು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಸುಪ್ರೀಂಕೋರ್ಟ್ ಕೊರೊನಾ ಪೀಡಿತರಿಗೆ ವಿಮೆ ಅನ್ವಯವಾಗುತ್ತದೆ ಎಂದು ಹೇಳಿದೆ.
ಅದಾರೂ ಕೊರೊನಾವೈರಸ್ ಸೋಂಕಿಗೆ ತುತ್ತಾದರೆ ಆಸ್ಪತ್ರೆ ವೆಚ್ಚ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಏನು ಮಾಡುವುದು ಎಂದು ಅನೇಕರ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ಕರ್ಣಾಟಕ ಬ್ಯಾಂಕ್ ಕೊರೊನಾ ವಿಮಾ ಯೋಜನೆ ಜಾರಿಗೊಳಿಸಿದೆ. ಇದು ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆ ನೀಡುವ ವಿಶೇಷ ವಿಮಾ ಯೋಜನೆಯಾಗಿದೆ.
399 ರುಪಾಯಿ ಕಂತು 399 ರುಪಾಯಿ ಕಂತನ್ನು ನೀಡುವ ಮೂಲಕ ಈ ವಿಮೆ ಪಡೆಯಬಹುದಾಗಿದೆ. ಗ್ರಾಹಕರಲ್ಲದವರೂ ವಿಮಾ ಕಂತನ್ನು ಪಾವತಿಸಿ, ವಿಮೆ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.
18 ರಿಂದ 65 ವಯಸ್ಸಿನ ವಯೋಮಿತಿ:
ಕೊರೊನಾವೈರಸ್ ಸೋಂಕಿನಿಂದ ಪೀಡಿತರಾದವರಿಗೆ ನೆರವಾಗಲು ಜನರಲ್ ಇನ್ಶುರೆನ್ಸ್ ಕಂಪನಿ, ಯುನಿವರ್ಸಲ್ ಸೋಂಪೆÇ ಸಹಭಾಗಿತ್ವದಲ್ಲಿ ಕರ್ನಾಟಕ ಬ್ಯಾಂಕ್ ವಿಮೆ ಯೋಜನೆ ಆರಂಭಿಸಿದೆ. ಈ ವಿಮಾ ಸೌಲಭ್ಯ 18 ರಿಂದ 65 ವಯಸ್ಸಿನ ವಯೋಮಿತಿಯ ಎಲ್ಲ ಗ್ರಾಹಕರಿಗೆ ಲಭ್ಯವಿದೆ.
3 ಲಕ್ಷ ರೂ.ಆಸ್ಪತ್ರೆ ಖರ್ಚು:
ಒಂದು ವೇಳೆ ಆಸ್ಪತ್ರೆ ಸೇರಬೇಕಾಗಿ ಬಂದಲ್ಲಿ ವಿಮಾದಾರರಿಗೆ 3 ಲಕ್ಷ ರುಪಾಯಿವರೆಗೆ ಆಸ್ಪತ್ರೆಯ ಖರ್ಚನ್ನು ಹಾಗೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ 3 ಸಾವಿರ ರುಪಾಯಿವರೆಗಿನ ಔಷಧಿಗಳ ಖರ್ಚನ್ನು ವಿಮಾ ನಿಯಮದಡಿ ಒದಗಿಸುಲಾಗುತ್ತದೆ.
ವಿಮೆಯ ಅವಧಿ ಮೂರು ತಿಂಗಳು!:
ಒಂದು ವೇಳೆ 14 ದಿನಗಳ ಕ್ವಾರಂಟೈನ್‍ಗೆ ಒಳಪಟ್ಟಲ್ಲಿ ದಿನಕ್ಕೆ 1 ಸಾವಿರ ರುಪಾಯಿವರೆಗೆ ಸರ್ಕಾರಿ ಅಥವಾ ಮಿಲಿಟರಿ ಆಸ್ಪತ್ರೆಗಳ ಕ್ವಾರಂಟೈನ್ ವೆಚ್ಚ ಭರಿಸಲು ಅವಕಾಶವಿದೆ. ವಿಮೆಯ ಅವಧಿ ಮೂರು ತಿಂಗಳಿನದ್ದಾಗಿರುತ್ತದೆ.



