ಪೆರ್ಲ: ಮನುಷ್ಯ ಜೀವನವನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಕೊರೊನಾ ವಾರಿಯರ್ಸ್ ಅದ್ವಿತೀಯ ಸೇವೆ ಸಲ್ಲಿಸಿದ್ದಾರೆ. ಕೊರೊನಾ ವೈರಸ್ ಹರಡದಂತೆ ಹಾಗೂ ಕೋವಿಡ್ ಬಾಧಿತರಿಗೆ ಚಿಕಿತ್ಸೆ ನೀಡುವಲ್ಲಿ ದಾದಿಯರು, ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಪೆÇಲೀಸರು, ಅಕಾರಿಗಳು ತಮ್ಮ ಜೀವವನ್ನೇ ಪಣವಿಟ್ಟು ಹೋರಾಡುತ್ತಿದ್ದಾರೆ.
ತಮ್ಮ ವೈಯುಕ್ತಿಕ ಜೀವನ ಮರೆತು ಸ್ವಯಂ ಪ್ರೇರಿತರಾಗಿ ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ನಿರಂತರ ಸೇವೆ ಸಲ್ಲಿಸಿ ಎಣ್ಮಕಜೆ ಗ್ರಾಮ ಪಂಚಾಯಿತಿ ನಲ್ಕ ಕೇರಿಮೂಲೆಯ ನಯನ ಯನ್.ನಾಯಕ್ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಉಕ್ಕಿನಡ್ಕ ಅನಂತಕೃಷ್ಣ ನಾಯಕ್ ಮತ್ತು ಶ್ಯಾಮಲಾ ಅವರ ಪುತ್ರಿ ನಯನಾ ಯಸ್ ನಾಯಕ್ ಸುಳ್ಯ ಕೆವಿಜಿಯಲ್ಲಿ ಡಿಎಮ್‍ಎಲ್‍ಟಿ ಶಿಕ್ಷಣ ಪಡೆದಿದ್ದರು.ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಿನ ವೇತನ ಆಧಾರದಲ್ಲಿ ಲ್ಯಾಬ್ ಟೆಕ್ನಿಶನ್ (ಐಸಿಟಿಸಿ) ಆಗಿ ಕಳೆದ ಐದು ವರ್ಷಗಳಿಂದ ದುಡಿಯುತ್ತಿರುವ ನಯನಾ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪತಿ ನಲ್ಕ ಕೇರಿಮೂಲೆಯ ಕೃಷಿಕ ನಾರಾಯಣ ನಾಯಕ್ ಮತ್ತು ಪುಟ್ಟ ಕಂದಮ್ಮಗಳಾದ ನಂದನ್(9), ನಯನ್(3)ಅವರಿಂದ ಬಹುತೇಕ ಎರಡು ತಿಂಗಳು ದೂರವೇ ಉಳಿದಿದ್ದ ನಯನಾ ಕಾಸರಗೋಡು ಸರಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕೋವಿಡ್ ಬಾತರ ಶುಶ್ರೂಷೆಯಲ್ಲಿ ತೊಡಗಿದ್ದರು.ಅವರ ಮಾನವೀಯ ಸೇವೆಯನ್ನು ಗುರುತಿಸಿದ ಕೇರಳ ಆರೋಗ್ಯ ಇಲಾಖೆ ನಯನಾ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.



