ಮಂಗಳೂರು: ಸ್ವಾಮಿ ರಮಾನಂದ ಸರಸ್ವತಿ (ಚಂದುಕುಟ್ಟಿ ಸ್ವಾಮಿ-98) ಸೋಮವಾರ ಮುಂಜಾನೆ ನಿಧನರಾದರು. ಕೊಲ್ಲೂರು ರಾಮನಂದಾಶ್ರಮ ಸಂಸ್ಥಾಪಕರಾಗಿದ್ದರು. ಮಲೆಯಾಳದ ಖ್ಯಾತ ನಟ ಮೋಹನ್ ಲಾಲ್ ಅವರನ್ನು 35 ವರ್ಷಗಳ ಹಿಂದೆ ಕೊಡಚಾದ್ರಿಗೆ ಕರೆದೊಯ್ದವರು ಸ್ವಾಮಿ ರಮಾನಂದರಾಗಿದ್ದರು.
ಹಲವಾರು ವರ್ಷಗಳ ಹಿಂದೆ ಮೋಹನ್ ಲಾಲ್ ಅವರ ಮನೆಗೆ ಭೇಟಿ ನೀಡಿದಾಗ ಸ್ವಾಮಿ 2020 ರ ವೇಳೆಗೆ ತಾನು ಇಹ ಜನಮ್ ತ್ಯಜಿಸುವುದಾಗಿ ಘೋಷಿಸಿದ್ದರು ಎನ್ನಲಾಗಿದೆ. ಒಂದೂವರೆ ವರ್ಷದ ಹಿಂದೆ ಸೂಪರ್ ಮಲೆಯಾಳ ಸಿನಿಮ ಒಡಿಯನ್ ಸಿನೆಮಾದ ಸೆಟ್‍ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ಸಂದರ್ಭ ಇನ್ನು ತಾನು ನಿನಗೆ ಭೇಟಿಗೆ ಸಿಗಲಾರೆ ಒಂದೂವರೆ ವರ್ಷಗಳಲ್ಲಿ ದೇಹ ತ್ಯಜಿಸುವೆನೆಂದು ತಿಳಿಸಿರುವರೆಂದು ಮೋಹನ್ ಲಾಲ್ ತಮ್ಮ ಪೆಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಸ್ವಾಮಿ ರಮಾನಂದ ಸರಸ್ವತಿ ಅವರು ಭಗವಾನ್ ನಿತ್ಯಾನಂದರ ಶಿಷ್ಯರಾಗಿದ್ದರು. ಕೋಝಿಕ್ಕೋಡ್‍ನ ಪಂತೀರಂಕಾವು ಮೂಲದ ಸ್ವಾಮಿ 50 ವರ್ಷಗಳ ಹಿಂದೆ ಕೊಲ್ಲೂರು ತಲುಪಿದ್ದು ದೇವಾಲ ಪರಿಸರದಲ್ಲಿ ಮತ್ತು ಕೊಡಾಚಾದ್ರಿ ಪರ್ವತದ ಗುಹೆಯೊಂದರಲ್ಲಿ ವಾಸಿಸುತ್ತಿದ್ದರು. ಬಳಿಕ ಮೂಕಾಂಬಿಕಾ ದೇವಾಲಯದ ಪರಿಸರದಲ್ಲಿ ಆಶ್ರಮವನ್ನು ಸ್ಥಾಪಿಸಿದರು.
ಕೊಡಚಾದ್ರಿಗೆ ಬೆಟ್ಟಕ್ಕೆ ತೆರಳುವ ಭಕ್ತರ ಸಹಾಯಕ್ಕೆ ರಸ್ತೆ ನಿರ್ಮಾಣಕ್ಕೆ ಅಗತ್ಯದ ನೆರವಿಗೆ ಸ್ವಾಮಿ ಸಹಕರಿಸಿದ್ದರು. ಸ್ವಾಮಿಯ ಅಂತ್ಯಕ್ರಿಯೆ ಕೊಲ್ಲೂರು ಸೌಪರ್ಣಿಕಾ ನದೀ ಪರಿಸರದಲ್ಲಿ ಸೋಮವಾರ ನಡೆಯಿತು.



