ಕಾಸರಗೋಡು: ಸರ್ಕಾರ ವಿಕ್ಟರ್ಸ್ ಚಾನೆಲ್ ಮೂಲಕ ಪ್ರಾರಂಭಿಸಿರುವ ಆನ್‍ಲೈನ್ ಕಲಿಕೆ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಾಗಿಸಬೇಕೆಂಬ ಭಾಗವಾಗಿ ಟಿ.ವಿ.ಸೌಕರ್ಯವಿಲ್ಲದ ಮಕ್ಕಳನ್ನು ಗುರುತಿಸಿ ನೆರವಾಗುವ ಚಟುವಟಿಕೆ ಅಲ್ಲಲ್ಲಿ ನಡೆಯುತ್ತಿದೆ.
ಆನ್ ಲೈನ್ ತರಗತಿ ವೀಕ್ಷಿಸಲು ಸಾಧ್ಯವಾಗದಿರುವ ಮಕ್ಕಳ ಮಾಹಿತಿ ಸಂಗ್ರಹಿಸಲು ಜಿಲ್ಲಾ ಆಯೋಗದ ಕೋರಿಕೆಯಂತೆ, ಅಜನೂರು ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಎಲ್ಲಾ ವಾರ್ಡ್‍ಗಳಿಂದ ಮಾಹಿತಿ ಸಂಗ್ರಹಿಸಿತು. ಏತನ್ಮಧ್ಯೆ, ದುರ್ಗಾ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಅರೋಮಲ್ ತನ್ನ ಕುಟುಂಬವು ಕಷ್ಟದಲ್ಲಿರುವುದರಿಂದ ತರಗತಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಕರಾವಳಿ ಸ್ವಯಂಸೇವಕ ತಂಡಕ್ಕೆ ಅವಲತ್ತುಕೊಂಡಳು.
ಅಜಾನೂರು ಗ್ರಾ.ಪಂ. ಅಧ್ಯಕ್ಷರು ಮತ್ತು ಕರಾವಳಿ ಸ್ವಯಂಸೇವಕ ತಂಡ, ಸಿಡಿಎಸ್, ಎಡಿಎಸ್ ಮತ್ತು ಇತರ 18 ಕುಟುಂಬಶ್ರೀ ಗುಂಪುಗಳ ಸಹಾಯದಿಂದ ವಿದ್ಯಾರ್ಥಿಗೆ ಟಿ.ವಿ. ಖರೀದಿಸಿ ವಿತರಿಸಲಾಯಿತು.
ಕುಟುಂಬಶ್ರೀ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್, ಗ್ರಾ.ಪಂ. ಸದಸ್ಯ ಡಿ.ಎಂ.ಸಿ ಹರಿದಾಸ್, ಸಿಡಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಟಿ.ವಿ. ಸೆಟ್ ನ್ನು ಅರೋಮಲ್‍ಗೆ ಹಸ್ತಾಂತರಿಸಿದರು. ಆರೊಮಲ್ ಪ್ರತಿಭಾನ್ವಿತ ವಿದ್ಯಾರ್ಥಿನಿಯೂ ಆಗಿದ್ದು ಕುಟುಂಬಶ್ರೀ, ಕರಾವಳಿ ಸ್ವಯಂಸೇವಕ ಸಮಿತಿ, ಕ್ರೀಡಾ ಸಮಿತಿಯ ಸದಸ್ಯೆಯೂ ಆಗಿರುವಳು.


