ಕಾಸರಗೋಡು: ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಕೇರಳ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ನೇತೃತ್ವದಲ್ಲಿ ಧರಣಿ ನಡೆಯಿತು.
ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಧರಣಿ ಮುಷ್ಕರದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸತ್ಯನ್ ಮೇಲ್ಪರಂಬ, ಕಾರ್ಯದರ್ಶಿ ಶಿವರಾಜ್ ಬೋವಿಕ್ಕಾನ, ಜೊತೆ ಕಾರ್ಯದರ್ಶಿ ರಾಜು ಸೀತಾಂಗೋಳಿ, ಸಂತೋಷ್, ಉಪಾಧ್ಯಕ್ಷರಾದ ಅಶೋಕನ್, ರಮೇಶನ್ ಪೆರ್ಲ, ರಾಜ್ಯ ಸಮಿತಿ ಸದಸ್ಯ ಪ್ರಮೋದ್ ಮಲ್ಲಿಕಾರ್ಜುನ ಮೊದಲಾದವರು ನೇತೃತ್ವ ನೀಡಿದರು.
ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಮೊದಲಾದ ಬೇ ಡಿಕೆಗಳನ್ನು ಮುಂದಿಟ್ಟು ರಾಜ್ಯದಾದ್ಯಂತ ಆಯೋಜಿಸಿದ ಪ್ರತಿಭಟನೆಯಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.


