ಕಾಸರಗೋಡು: ಲಾಕ್‍ಡೌನ್‍ನ ನೆಪದಲ್ಲಿ ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಹಿಂಬಾಗಿಲ ಮೂಲಕ ಪಕ್ಷದವರನ್ನು ನೇಮಕ ಮಾಡಲು ಯತ್ನ ನಡೆದರೆ ಅದರ ವಿರುದ್ಧ ತೀವ್ರ ಆಂದೋಲನ ನಡೆಸುವುದಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್ ಎಚ್ಚರಿಸಿದ್ದಾರೆ.
ಯುವಮೋರ್ಚಾ ಕಾಸರಗೋಡು ಮಂಡಲ ಸಮಿತಿ ನಡೆಸುವ ಯುವಜನ ವಂಚನೆ ವಿರುದ್ಧ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದವರನ್ನು ಸೇರಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಹೊರಡಿಸಿದ ನೋಟಿಫಿಕೇಶನನ್ನು ಕನಿಷ್ಠ ದಿನದಲ್ಲೇ ಹಿಂತೆಗೆದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.
ಯುವಮೋರ್ಚಾ ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ, ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಮೊದಲಾದವರು ನಿರಾಹಾರ ನಡೆಸಿದರು.
ಮಂಡಲ ಕಾರ್ಯದರ್ಶಿ ಶರತ್ ಪುಂಡೂರು, ಮಂಡಲ ಕೋಶಾ„ಕಾರಿ ರಾಮಚಂದ್ರನ್, ಪ್ರತೀಶ್ ಬೆಳಿಂಜ, ಅಗ್ನೇಷ್, ಅಶೋಕ್, ಉಣ್ಣಿಕೃಷ್ಣನ್ ಭಾಗವಹಿಸಿದರು.

