ಕಾಸರಗೋಡು: ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್) ಆಸ್ಪತ್ರೆಯನ್ನು ಕಾಸರಗೋಡಿಗೆ ಮಂಜೂರು ಮಾಡಬೇಕೆಂದು ಮಲಯಾಳದ ಖ್ಯಾತ ಸಿನಿಮಾ ನಟ ಕುಂಜಾಕೋ ಬೋಬನ್ ಆಗ್ರಹಿಸಿದ್ದಾರೆ.
ಎಂಡೋಸಲ್ಪಾನ್ ಪೀಡಿತ ಪ್ರದೇಶವಾದ ಕಾಸರಗೋಡಿನ ವಿವಿಧ ಪ್ರದೇಶಗಳಿಗೆ ಸಂದರ್ಶಿಸಿ ಅಲ್ಲಿನ ದಯನೀಯ ಸ್ಥಿತಿಗತಿಗಳನ್ನು ತಾನು ನೇರವಾಗಿ ತಿಳಿದುಕೊಂಡಿದ್ದೇನೆ. ಅಲ್ಲಿನ ಜನರು ಎದುರಿಸುತ್ತಿರುವ ದಯನೀಯ ಸ್ಥಿತಿಗತಿಗಳನ್ನು ಮನದಟ್ಟು ಮಾಡಿಕೊಂಡ ವ್ಯಕ್ತಿ ನಾನಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕುಂಜಾಕೋ ಬೋಬನ್ ತಿಳಿಸಿದ್ದಾರೆ.
ಎಂಡೋಸಲ್ಪಾನ್ ದುರಂತಗಳ ಬೆನ್ನಲ್ಲೇ ಈಗ ಕೋವಿಡ್-19 ದುರಂತ ಕೂಡಾ ಎದುರಾಗಿದೆ. ಇದನ್ನೆಲ್ಲಾ ಪರಿಶೀಲಿಸಿ ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಕಾಸರಗೋಡಿನಲ್ಲಿ ಸ್ಥಾಪಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.

