ತಿರುವನಂತಪುರ: ಅರ್ಜಿ ಸಲ್ಲಿಸಿದ 24 ಗಂಟೆಗಳೊಳಗೆ ರೇಶನ್ ಕಾರ್ಡ್ ನೀಡುವ ಯೋಜನೆ ತಾತ್ಕಾಲಿಕವಾಗಿ ನಿಲುಗಡೆಗೊಳಿಸಲು ಸಿವಿಲ್ ಸಪ್ಲೈಸ್ ಇಲಾಖೆ ಆಲೋಚಿಸಿದೆ. ಈ ರೀತಿ ವಿತರಿಸಿದ ಕಾರ್ಡ್‍ಗಳಲ್ಲಿ ಪ್ರಸ್ತುತ ಇರುವ ಕಾರ್ಡ್‍ನ ಸದಸ್ಯರು ಕೂಡಾ ಸೇರಿರಬಹುದೆಂಬ ಶಂಕೆಯೇ ಇದಕ್ಕೆ ಕಾರಣವಾಗಿದೆ.
37000 ರೇಶನ್ ಕಾರ್ಡ್‍ಗಳನ್ನು ಲಾಕ್‍ಡೌನ್ ಕಾಲಾವಧಿಯಲ್ಲಿ ನಾಗರಿಕ ಪೂರೈಕಾ ಇಲಾಖೆ ಈ ಪ್ರಕಾರ ನೀಡಿದೆ. ಅಕ್ಷಯ ಕೇಂದ್ರಗಳ ಮೂಲಕ ಅರ್ಜಿ, ಆಧಾರ್ ಕಾರ್ಡ್‍ನ ಪ್ರತಿ ಸಹಿತ ಭಾವಚಿತ್ರ, ಸ್ಥಳೀಯ ನಿವಾಸಿ ಎಂದು ದೃಢೀಕರಿಸುವ ಸ್ಥಳೀಯ ಕೌನ್ಸಿಲರ್ ಅಥವಾ ಪಂಚಾಯತ್ ಸದಸ್ಯನ ವರದಿ, ಫೆÇೀನ್ ನಂಬ್ರ ನೀಡಿದರೆ ತಾಲೂಕು ಸಪ್ಲೈ ಆಫೀಸ್‍ಗಳು, ಸಿಟಿ ರೇಶನಿಂಗ್ ಕಚೇರಿಗಳ ಮೂಲಕ ಕಾರ್ಡ್ ವಿತರಣೆ ಮಾಡುವ ರೀತಿ ಅನುಸರಿಸಲಾಗಿತ್ತು. ಪ್ರಸ್ತುತ ಇರುವ ರೇಶನ್ ಕಾರ್ಡ್ ವಾರೀಸುದಾರರಲ್ಲಿ ಶೇ.90 ಮಂದಿ ಆಧಾರ್‍ನೊಂದಿಗೆ ಲಿಂಕ್ ಮಾಡಿದವರಾದರೂ ಕಾರ್ಡ್‍ನ ಸದಸ್ಯರೆಲ್ಲರೂ ಆಧಾರ್ ಲಿಂಕ್ ಮಾಡಿಲ್ಲ. ಆದುದರಿಂದ ಈಗ ರೇಶನ್ ಕಾರ್ಡ್‍ನಲ್ಲಿ ಸೇರಿದವರು ಹೊಸ ರೇಶನ್ ಕಾರ್ಡ್ ಪಡೆದಿದ್ದಾರೆಯೇ ಎಂದು ಪರಿಶೀಲಿಸುವ ವ್ಯವಸ್ಥೆ ಇಲ್ಲ. ತಾಲೂಕು ಸಪ್ಲೈ ಅಧಿಕಾರಿಗಳು, ರೇಶನಿಂಗ್ ಇನ್ಸ್‍ಪೆಕ್ಟರ್‍ಗಳು, ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕಾರ್ಡ್ ನೀಡುವುದಾದರೂ ಸಮಗ್ರ ತನಿಖೆ ನಡೆಸಲು ಲಾಕ್‍ಡೌನ್ ವೇಳೆ ಸಾಧ್ಯವಾಗಿರಲಿಲ್ಲ.
ಈ ಸನ್ನಿವೇಶದಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಚಿಂತಿಸಲಾಗಿದೆ. ಇದೇ ವೇಳೆ ರೇಶನ್ ಕಾರ್ಡ್ ಸದಸ್ಯರೆಲ್ಲರ ಆಧಾರ್ ಲಿಂಕ್ ಇಲಾಖೆಯ ಪರಿಗಣನೆಯಲ್ಲಿದೆ. ಜೊತೆಗೆ ರೇಶನ್ ಕಾರ್ಡ್ ವಾರೀಸುದಾರರಿಗೆ ಅವರ ಮೊಬೈಲ್ ಸಂಖ್ಯೆಯನ್ನು ಅಪ್‍ಡೇಟ್ ಮಾಡಲು ಸಂದರ್ಭ ಒದಗಿಸಲಾಗುವುದು. ಆದರೆ ಕುಟುಂಬ ಕಾರ್ಡ್‍ನಿಂದ ಹೆಸರು ತೆರವುಗೊಳಿಸಿ ಹೊಸ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಲಿರುವ ಸೌಕರ್ಯವನ್ನು ಸಿದ್ಧಪಡಿಸಲು ತಾಲೂಕು ಸಪ್ಲೈ ಆಫೀಸರ್‍ಗಳಿಗೆ ನಿರ್ದೇಶ ನೀಡಿರುವುದಾಗಿ ಸಿವಿಲ್ ಸಪ್ಲೈ ಅಧಿಕಾರಿಗಳು ತಿಳಿಸಿದ್ದಾರೆ.


