ಬದಿಯಡ್ಕ: ಒಳಚರಂಡಿ ಅವ್ಯವಸ್ಥೆಯಿಂದ ಮಳೆ ನೀರು ಮನೆಗಳಿಗೆ ಹರಿಯುವ ಮೂಲಕ ಭಾರೀ ಸಮಸ್ಯೆ ಎದುರಾಗಿದ್ದು, ಪೊಡಿಪ್ಪಳ್ಳ ಪ್ರದೇಶಕ್ಕೆ ಬಿಜೆಪಿ ಜನಪ್ರತಿನಿಧಿಗಳು ಹಾಗು ಮುಖಂಡರು ಭೇಟಿ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಕೆ.ಶ್ರೀಕಾಂತ್, ಕುಂಬ್ಡಾಜೆ ಪಂಚಾಯತಿ ಸದಸ್ಯರುಗಳಾದ ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ನೇತಾರರಾದ ಸುಧಾಮ ಗೋಸಾಡ, ರಾಜೇಶ್ ಶೆಟ್ಟಿ ಮೊದಲಾದವರು ನಿಯೋಗದಲ್ಲಿದ್ದರು.
ಸ್ಥಳೀಯರವಾದ ರಾಜೇಶ್ ಪೊಡಿಪ್ಪಳ್ಳ, ಜನಾರ್ಧನ ಅವರಿಂದ ಮಾಹಿತಿ ಪಡೆದು ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದಲ್ಲಿ ಸ್ಥಳೀಯರ ಜೊತೆ ಸೇರಿ ಹೋರಾಟ ನಡೆಸುವುದಾಗಿ ನೇತಾರರು ಲೋಕೋಪಯೋಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಡಿಪ್ಪಳ್ಳ ಬಸ್ ಸ್ಟಾಪ್‍ನಿಂದ ಸುಮಾರು 250 ಮೀಟರ್‍ವರೆಗೆ ರಸ್ತೆ ಅಗಲಗೊಳಿಸಿದ ವೇಳೆ ಹಳೆ ಚರಂಡಿ ಮುಚ್ಚಲಾಗಿತ್ತು. ನೂತನ ಚರಂಡಿ ನಿರ್ಮಿಸಿರಲಿಲ್ಲ. ಇದರಿಂದಾಗಿ ಮಳೆ ನೀರು ಹರಿದು 10 ಕ್ಕೂ ಹೆಚ್ಚು ಮನೆಗಳು ಹಾನಿಯಾಗಿತ್ತು. ಮಳೆ ನೀರು ಅಲ್ಲಲ್ಲಿ ಕಟ್ಟಿ ನಿಂತಿದ್ದು, ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿತ್ತು.
ಸ್ಥಳೀಯರು ದೂರು ನೀಡಿದರೂ ಬದಿಯಡ್ಕದ ಸಹಾಯಕ ಅಭಿಯಂತರ ಸಹಿತ ಅಧಿಕಾರಿಗಳು ಪೆÇಡಿಪ್ಪಳ್ಳದತ್ತ ಗಮನ ಹರಿಸಿರಲಿಲ್ಲ. ಇದರಿಂದಾಗಿ ಸ್ಥಳೀಯರು ಲೋಕೋಪಯೋಗಿ ಸಚಿವರು, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.


