ಪೆರ್ಲ:ಕಾಸರಗೋಡು ಜಿಲ್ಲೆಯಾದ್ಯಂತ ಬುಧವಾರ ಬೆಳಗ್ಗೆ ಗಾಳಿಯೊಂದಿಗೆ ಗುಡುಗು ಮಿಂಚಿನ ಮಳೆಯಾಗಿದ್ದು ಹಲವೆಡೆ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.
ಅನಿರೀಕ್ಷಿತ ಸಿಡಿಲಿಗೆ ಸ್ವರ್ಗ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಕೆದಂಬಾಯಿಮೂಲೆ ಕೆ.ವೈ.ಸುಬ್ರಹ್ಮಣ್ಯ ಭಟ್ ಅವರ ಮನೆಯ ಕಂಪ್ಯೂಟರ್ ಸಹಿತ ವಿದ್ಯುತ್ ಉಪಕರಣಗಳು ಹಾನಿಯಾಗಿವೆ.ವಯರಿಂಗ್ ಸುಟ್ಟು ಕರಕಲಾಗಿದ್ದು ಸುಮಾರು ಒಂದು ಲಕ್ಷ ನಷ್ಟ ಅಂದಾಜಿಸಲಾಗಿದೆ.


