HEALTH TIPS

Fact Check: ಮತ್ತೊಂದು ಲಾಕ್ಡೌನ್? ಜೂನ್ 15ರಿಂದ ವಿಸ್ತರಣೆ?

             ನವದೆಹಲಿ,: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಹಲವು ಕ್ರಮಗಳಲ್ಲಿ ಲಾಕ್ಡೌನ್ ಪ್ರಮುಖವಾಗಿದ್ದು, ಲಾಕ್ಡೌನ್ ಕುರಿತಂತೆ ಸುಳ್ಳು ಸುದ್ದಿಗಳು ಕೂಡಾ ಹರಡುತ್ತಲೇ ಇದೆ. ಲಾಕ್ ಡೌನ್ ಹೇಗೆ ನಿಭಾಯಿಸಬೇಕು, ಹಂತ ಹಂತವಾಗಿ ಹೇಗೆ ಜಾರಿಗೊಳಿಸಬೇಕು ಎಂಬ ನಿರ್ದೇಶನವನ್ನು ಕೇಂದ್ರ ಗೃಹ ಸಚಿವಾಲಯ ಮಾತ್ರ ನೀಡಲಿದ್ದು, ರಾಜ್ಯ ಸರ್ಕಾರಗಳು ಕೊಂಚ ಬದಲಾವಣೆ ಮಾಡಿಕೊಳ್ಳಬಹುದು ಆದರೆ, ಬೇರೆ ಯಾವುದೇ ಮೂಲದಿಂದ ಸುದ್ದಿ ಬಂದರೂ ನಂಬಬೇಡಿ ಎಂದು ಸರ್ಕಾರ ತಿಳಿಸಿದೆ.
          ಸದ್ಯ ಜೂನ್ 15ರಿಂದ ಲಾಕ್ಡೌನ್ ವಿಸ್ತರಣೆಯಾಗಲಿದೆ ಎಂಬ ವಾಟ್ಸಾಪ್ ಸಂದೇಶ, ಟ್ವೀಟ್, ಫೇಸ್ಬುಕ್ ಪೋಸ್ಟ್ ಹರಡುತ್ತಿದೆ. ಈ ರೀತಿ ಸಂದೇಶ ಬಂದರೆ ತಕ್ಷಣವೇ ಎಚ್ಚರವಾಗಿ, ಏಕೆಂದರೆ, ಲಾಕ್ ಡೌನ್ ಕುರಿತಂತೆ ಯಾವುದೇ ಆದೇಶ ಬಂದರೂ ಪ್ರಧಾನಿ ಮೋದಿ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಘೋಷಣೆ ನಿರೀಕ್ಷಿಸಬಹುದು. ಟ್ವಿಟ್ಟರ್ ನಲ್ಲಿ PIB Check ಖಾತೆಯಲ್ಲಿ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಲಾಕ್ಡೌನ್ ವಿಸ್ತರಣೆ ಕುರಿತಂತೆ ಯಾವುದೇ ವಾಟ್ಸಾಪ್ ಸಂದೇಶವನ್ನು ನಂಬಬೇಡಿ ಎಂದು ಹೇಳಲಾಗಿದೆ.
            ಈ ಹಿಂದಿನ ಸುಳ್ಳು ಸುದ್ದಿ :
   ಏಪ್ರಿಲ್ 15 ಹಾಗೂ ಏಪ್ರಿಲ್ 19 ಅವಧಿಯಲ್ಲಿ ಲಾಕ್ ಡೌನ್ ಇರುವುದಿಲ್ಲ. ಏಪ್ರಿಲ್ 20 ರಿಂದ ಮೇ 18ರ ಅವಧಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕೊರೊನಾವೈರಸ್ ಹರಡುವಿಕೆ ಪ್ರಗತಿ ಶೂನ್ಯ ಮುಟ್ಟುವ ತನಕ ಲಾಕ್ ಡೌನ್ ಅನಿವಾರ್ಯ ಎನ್ನಲಾಗಿತ್ತು. ಮುಂದುವರೆದು ಮೇ19 ರಿಂದ ಮೇ 24ರ ಅವಧಿಯಲ್ಲಿ ಲಾಕ್ ಡೌನ್ ಗೆ ವಿರಾಮ. ಮೇ 25 ರಿಂದ ಜೂನ್ 10ರ ಅವಧಿಗೆ ಕೊನೆಯ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. 29ನೇ ಜೂನ್ ಮೂರನೆ ಹಂತ, ಜುಲೈ 20ಕ್ಕೆ ನಾಲ್ಕನೇ ಹಂತ ಹಾಗೂ ಆಗಸ್ಟ್ 10ಕ್ಕೆ ಐದನೇ ಹಂತಕ್ಕೆ ಮುಕ್ತಾಯವಾಗಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
        ಜೀ ನ್ಯೂಸ್ ಸುದ್ದಿ ಎಂದು ಹಂಚಿಕೆ !:
   ಜೂನ್ 15ರಿಂದ ಮತ್ತೊಂದು ಅವಧಿಗೆ ಲಾಕ್ಡೌನ್ ವಿಸ್ತರಣೆಯಾಗಲಿದೆ ಎಂದು ಜೀ ನ್ಯೂಸ್ ನಲ್ಲಿ ವರದಿ ಬಂದಿದೆ ಎಂದು ವಾಟ್ಸಾಪ್ ಸಂದೇಶ ಹರಡುತ್ತಿದೆ. ಗೃಹ ಸಚಿವಾಲಯವು ಮತ್ತೆ ಲಾಕ್ಡೌನ್ ಗಾಗಿ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದು, ವಿಮಾನಯಾನ, ರೈಲ್ವೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ ಎಂಬ ಸುದ್ದಿ ಹರಡಿಸಲಾಗುತ್ತಿದೆ.
        ಜೀ ನ್ಯೂಸ್ ನಿಂದ ಸ್ಪಷ್ಟನೆ :
   ಜೂನ್ 15ರಿಂದ ಲಾಕ್ಡೌನ್ ವಿಸ್ತರಣೆ ಬಗ್ಗೆ ಜೀ ನ್ಯೂಸ್ ಯಾವುದೇ ಸುದ್ದಿ ಮಾಡಿಲ್ಲ. ವಾಟ್ಸಾಪ್ ನಲ್ಲಿ ಹರಡುತ್ತಿರುವ ಸುದ್ದಿ ಎಲ್ಲವೂ ಸುಳ್ಳು ಎಂದು ಜೀ ನ್ಯೂಸ್ ಸ್ಪಷ್ಟಪಡಿಸಿದೆ. ಇದರ ಜೊತೆಗೆ ವಾಟ್ಸಾಪ್ ಸಂದೇಶದಲ್ಲಿ ಜೀ ನ್ಯೂಸ್ ಲೋಗೋ ದುರ್ಬಳಕೆ ಮಾಡಿಕೊಂಡು, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದೆ.
       ಇತ್ತೀಚಿನ ಲಾಕ್ಡೌನ್ ಮಾರ್ಗಸೂಚಿ ಏನಿದೆ? :
   ಮೇ 30ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅನ್ ಲಾಕ್ ಮಾರ್ಗಸೂಚಿಯಂತೆ ಜೂಣ್ 8ರಿಂದ ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ತೆರೆಯಲಾಗಿವೆ. ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್ ಆರಂಭವಾಗಿದೆ. ಎರಡನೇ ಹಂತದಲ್ಲಿ ಶಾಲೆ, ಕಾಲೇಜು, ವಿಮಾನಯಾನ, ಮೆಟ್ರೋ ರೈಲು, ಸಿನಿಮಾ ಹಾಲ್, ಜಿಮ್, ಮನರಂಜನಾ ಪಾರ್ಕ್, ಬಾರ್ ಮುಂತಾದವು ಓಪನ್ ಆಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries