ಕಾಸರಗೋಡು: ಶಿವಗಿರಿ ಟೂರಿಸಂ ಸಕ್ರ್ಯೂಟ್ ಯೋಜನೆಯನ್ನು ಹಿಂತೆಗೆದುಕೊಂಡ ಸರಕಾರದ ಕ್ರಮವನ್ನು ಪ್ರತಿಭಟಿಸಿ ಒಬಿಸಿ ಕಾಂಗ್ರೆಸ್ ಕಾಸರಗೋಡು ಬ್ಲಾಕ್ ಸಮಿತಿ ನೇತೃತ್ವದಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು.
ಕಾಂಗ್ರೆಸ್ ಮುಖಂಡ ಪಿ.ಎ.ಅಶ್ರಫಲಿ ಉದ್ಘಾಟಿಸಿದರು. ಒಬಿಸಿ ಬ್ಲಾಕ್ ಅಧ್ಯಕ್ಷ ಮುನೀರ್ ಬಾಂಗೋಡು ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಅಧ್ಯಕ್ಷ ಕೆ.ಖಾಲಿದ್, ಒಬಿಸಿ ರಾಜ್ಯ ಉಪಾಧ್ಯಕ್ಷ ರವೀಂದ್ರ ಮಾಸ್ಟರ್ ಶೇಣಿ, ಉಸ್ಮಾನ್ ಕಡವತ್, ವಟ್ಟಕ್ಕಾಡ್ ಮುಹಮ್ಮದ್, ಜಮೀಲ ಅಹಮ್ಮದ್, ಪಿ.ಕೆ.ವಿಜಯನ್, ಕೆ.ಟಿ.ಸುಭಾಷ್ ನಾರಾಯಣನ್, ಸಿಲೋನ್ ಅಶ್ರಫ್, ಸುಂದರನ್, ಕೆ.ಜಯರಾಂ, ಆಶಿಫ್, ಶಶಿಧರನ್ ಮೊದಲಾದವರು ಮಾತನಾಡಿದರು.

