ತಿರುವನಂತಪುರ: ರಾಜ್ಯದಲ್ಲಿ ವನಾಂತರದೊಳಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಕೇರಳ ಪೆÇಲೀಸರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ವಿಶೇಷ ತನಿಖಾ ವ್ಯವಸ್ಥೆಗೆ ರೂಪು ನೀಡಲಿದ್ದಾರೆ. ಪೆÇಲೀಸ್ ಇಲಾಖೆಯಲ್ಲಿ ಹೊಸತಾಗಿ ವನ್ಯಜೀವಿ ಅಪರಾಧ ತನಿಖಾ ಘಟಕವನ್ನು ಸ್ಥಾಪಿಸಲಾಗುವುದು. ಇದು ಕಾಡಿನೊಳಗಿನ ಅಪರಾಧಗಳನ್ನು ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ತನಿಖೆ ಮಾಡಲು ಸಾಧ್ಯವಾಗುತ್ತದೆ. ಈ ಘಟಕವು ಪೆÇಲೀಸ್ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ತಿರುವನಂತಪುರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಹಿರಿಯ ಪೆÇಲೀಸ್ ಮತ್ತು ಅರಣ್ಯ ಅಧಿಕಾರಿಗಳ ಸಭೆಯಲ್ಲಿ ವನ್ಯಜೀವಿ ಅಪರಾಧ ತನಿಖಾ ಘಟಕವನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪೆÇಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಇನ್ನು ಮುಂದೆ ಕಾಡಿನೊಳಗಿನ ಅಪರಾಧಕ್ಕೆ ಸಂಬಂಧಿಸಿದ ಗುಪ್ತಚರ ಮಾಹಿತಿಗಳನ್ನು ಪತ್ತೆಹಚ್ಚಿ ನಿಯಂತ್ರಿಸಲಿದೆ. ಇಂತಹ ಕಾನೂನು ಪ್ರಕ್ರಿಯೆ ಜಾರಿಗೆ ಬರುವುದರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಕೂಡಲೇ ನ್ಯಾಯಕ್ಕೆ ಹಾಜರುಪಡಿಸಲು ನೆರವಾಗಲಿದೆ.
ನೂತನ ವ್ಯವಸ್ಥೆ ವನ್ಯಜೀವಿ ಮತ್ತು ವನ್ಯಜೀವಿಗಳ ಮೇಲಿನ ದಾಳಿಯನ್ನು ತಡೆಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ಪೆÇಲೀಸ್ ಇಲಾಖೆ ವ್ಯಕ್ತಪಡಿಸಿದೆ. ಪರಿಸರ ಸಂಬಂಧಿತ ಅಪರಾಧಗಳನ್ನು ನಿಗ್ರಹಿಸಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಮೂರು ತಿಂಗಳಿಗೊಮ್ಮೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೆÇಲೀಸ್, ಅರಣ್ಯ, ಕಂದಾಯ ಮತ್ತು ಪ.ವರ್ಗ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.


