ಪೆರ್ಲ:ಚೆರ್ಕಳ ಕಲ್ಲಡ್ಕ ಅಂತರ್ ರಾಜ್ಯ ಹೆದ್ದಾರಿ ಕೇರಳ-ಕರ್ನಾಟಕ ಗಡಿ ಸಾರಡ್ಕ ಚೆಕ್‍ಪೆÇೀಸ್ಟ್ ತೆರೆಯಲು ಅಗತ್ಯದ ಕ್ರಮ ಕೈಗೊಳ್ಳುವುದಾಗಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಲಾಕ್ ಡೌನ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದ್ದರೂ ಕರ್ನಾಟಕ ಪೆÇಲೀಸರು ಸಾರಡ್ಕ ಚೆಕ್ ಪೆÇೀಸ್ಟ್ ಮೂಲಕ ವಾಹನ ಸಂಚಾರ ನಿಷೇಧಿಸಿದ್ದು ರಸ್ತೆಯನ್ನು ಸಂಚಾರ ಮುಕ್ತಗೊಳಿಸುವಂತೆ ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಎಣ್ಮಕಜೆ ಪಂಚಾಯಿತಿ ಯುಡಿಎಫ್ ನೇತಾರರು ಶಕುಂತಲಾ ಶೆಟ್ಟಿ ಅವರಿಗೆ ಮನವಿ ನೀಡಿದ್ದರು.
ಸಾರಡ್ಕ ಚೆಕ್ ಪೆÇೀಸ್ಟ್ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ಮುಖ್ಯಮಂತ್ರಿ, ವಿಪಕ್ಷ ನಾಯಕ, ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಕುಂಞ, ದ.ಕ.ಡಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಬಾಳೆಕಲ್ಲು, ನೇತಾರ ಅಬ್ದುಲ್ ಕರೀಂ, ಕಾಸರಗೋಡು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಯುಡಿಎಫ್ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ, ಕಾರ್ಯದರ್ಶಿ ಅಬೂಬಕ್ಕರ್ ಪೆರ್ದನೆ, ಲಕ್ಷ್ಮಣ ಪ್ರಭು ಕುಂಬಳೆ, ಎಣ್ಮಕಜೆ ಗ್ರಾ.ಪಂ. ಪಂಚಾಯತ್ ಅಧ್ಯಕ್ಷೆ ಶಾರದಾ ವೈ., ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಆಯಿಷಾ ಎ.ಎ., ಸದಸ್ಯ ಐತ್ತಪ್ಪ ಕುಲಾಲ್, ಸಿದ್ದಿಕ್ ವಳಮೊಗರು, ಯಡಿಎಫ್ ನೇರಾರರಾದ ಅಬ್ದುಲ್ ರಹಮಾನ್ ಪೆರ್ಲ, ಆಮು ಅಡ್ಕಸ್ಥಳ, ಅಬ್ದುಲ್ಲ ಕುರಡ್ಕ, ರಜಾಕ್ ನಲ್ಕ, ಕಲಂದರ್ ಅಡ್ಯನಡ್ಕ, ಹನೀಫ್ ಕಾಟುಕುಕ್ಕೆ ಉಪಸ್ಥಿತರಿದ್ದರು.


