ಕಾಸರಗೋಡು: ಭಾರತ-ಚೀನಾ ಗಡಿಯಲ್ಲಿ ಭಾರತದ 20ರಷ್ಟು ವೀರ ಯೋಧರನ್ನು ಚೀನಾದ ಸೈನ್ಯ ಹತ್ಯೆ ಮಾಡಿದಾಗ ಎಲ್ಲಾ ರಾಷ್ಟ್ರಗಳು ಅದನ್ನು ವಿರೋ„ಸಿದೆ. ಆದರೆ ನಮ್ಮ ದೇಶದ ಕಾಂಗ್ರೆಸ್ ಮತ್ತು ಸಿಪಿಎಂ ಪ್ರತಿಭಟಿಸುವ ಬದಲು ಭಾರತದ ಸೈನಿಕರನ್ನು ಅವಮಾನಗೈದಿದೆ. ಇದು ಖಂಡನಾರ್ಹ ಎಂದು ಬಿಜೆಪಿ ಕಾಸರಗೋಡು ಜಿಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಭಾರತ-ಚೀನಾ ಗಡಿ ಗ್ಯಾಲ್ವಾನ್ ಕಣಿವೆಯಲ್ಲಿ ಭಾರತದ ವೀರ ಯೋಧರ ಮೇಲೆ ಚೀನಾ ನಡೆಸಿದ ಆಕ್ರಮಣವನ್ನು ವಿರೋಧಿಸಿ ಹಾಗು ಸಿಪಿಎಂ ಮತ್ತು ಕಾಂಗ್ರೆಸ್‍ನ ರಾಷ್ಟ್ರ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಕರಂದಕ್ಕಾಡ್‍ನಲ್ಲಿ ಮಂಗಳವಾರ ಜರಗಿದ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್, ಸುಧಾಮ ಗೋಸಾಡ, ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಬಿಜೆಪಿ ಉತ್ತರವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಪಕ್ಷದ ವಿವಿಧ ಕ್ಷೇತ್ರದ ನೇತಾರರಾದ ನ್ಯಾಯವಾದಿ ಸದಾನಂದ ರೈ, ಎ.ಕೆ.ಕಯ್ಯಾರ್, ಎನ್.ಸತೀಶ್, ಪಿ.ಆರ್.ಸುನಿಲ್, ಧನಂಜಯ ಮಧೂರು, ಮಾಧವ ಮಾಸ್ಟರ್, ಸವಿತಾ ಟೀಚರ್, ರವಿ ಕರಂದಕ್ಕಾಡು, ಶ್ರೀಲತಾ ಟೀಚರ್, ಉಮಾ ಕಡಪ್ಪುರ, ಅರುಣ್‍ಕುಮಾರ್, ಸಂಧ್ಯಾ ಶೆಟ್ಟಿ, ಮನೋಹರನ್ ಮತ್ತಿತರರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಕಾರ್ಯಕರ್ತರು ವೀರ ಜವಾನರ ಸ್ಮೃತಿ ಮಂಟಪದ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಕೊನೆಯಲ್ಲಿ ಚೀನಾದ ಧ್ವಜ ಮತ್ತು ಚೀನಾ ಅಧ್ಯಕ್ಷರ ಪ್ರತಿಕೃತಿಯನ್ನು ದಹಿಸಿ ಚೀನಾಕ್ಕೆ ಧಿಕ್ಕಾರ ಘೋಷಣೆಯನ್ನು ಕೂಗಿದರು.

