ತಿರುವನಂತಪುರ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೋಲೀಸರನ್ನೇ ವಂಚಿಸುವ ಹಲವು ಜಾಲಗಳಂತೆ ಈಗೀಗ ಪೋಲೀಸರಿಗೆ ನಕಲಿ ಸಂದೇಶ ಕಳಿಸಿ ಗೊಂದಲಗೊಳಿಸುವವರ ಸಂಖ್ಯೆಯೂ ಹೆಚ್ಚುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪೆÇಲೀಸ್ ನಿಯಂತ್ರಣ ಕೊಠಡಿಯ 112 ಟೋಲ್ ಪ್ರೀ ಸಂಖ್ಯೆ ಬಳಸಿ ನಕಲಿ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಕೇರಳ ಪೆÇಲೀಸರು ಇಬ್ಬರ ವಿರುದ್ದ ದೂರು ದಾಖಲಿಸಿದ್ದಾರೆ.
ಆಲಪ್ಪುಳ ಮತ್ತು ವಯನಾಡ್ ಜಿಲ್ಲೆಗಳ ಎರಡು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆÇಲೀಸರು ನಕಲಿ ಸಂದೇಶಗಳನ್ನು ಕಳಿಸಿದವರೆನ್ನಲಾದ ಇಬ್ಬರನ್ನು ಬಂಧಿಸಿದ್ದಾರೆ. ಆಲಪ್ಪುಳ ಜಿಲ್ಲೆಯ ಕನಕಕ್ಕುನ್ನು ಪೆÇಲೀಸ್ ಠಾಣೆ ಮತ್ತು ವಯನಾಡ್ ಜಿಲ್ಲೆಯ ಕಲ್ಪೆಟ್ಟ ಪೆÇಲೀಸ್ ಠಾಣೆಗಳಿಗೆ ನಕಲಿ ಸಂದೇಶಗಳು ಬಂದಿವೆ.
ತುರ್ತು ನೆರವು ಕೋರಿಕೆಗಳು ಮತ್ತು ದೂರುಗಳ ಬಗ್ಗೆ ಪೆÇಲೀಸರನ್ನು ಎಚ್ಚರಿಸಲು ಸಾರ್ವಜನಿಕರು ಬಳಸಬಹುದಾದ 112 ಸಂಖ್ಯೆಯಲ್ಲಿ ಸುಳ್ಳು ಸಂದೇಶಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಹೇಳಿದ್ದಾರೆ.


