ತಿರುವನಂತಪುರ: ಮಕ್ಕಳ ಅಶ್ಲೀಲ ವಿಡಿಯೋ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿದ 47 ಜನರನ್ನು ಬಂಧಿಸಲಾಗಿದೆ. ಕೇರಳ ಪೆÇಲೀಸ್ ಸೈಬರ್ ವಿಭಾಗ ನಡೆಸಿದ ಆಪರೇಷನ್ ಪಿ-ಹಂಟ್ ನ ಭಾಗವಾಗಿ ಶನಿವಾರ ರಾಜ್ಯ ವ್ಯಾಪಕವಾಗಿ ವಿವಿಧೆಡೆಗಳಿಂದ 47 ಮಂದಿಗಳನ್ನು ಬಂಧಿಸಲಾಗಿದೆ. ಒಟ್ಟು 89 ಪ್ರಕರಣಗಳು ದಾಖಲಾಗಿವೆ.
ರಾಜ್ಯವ್ಯಾಪಿ ತಪಾಸಣೆಯಲ್ಲಿ ಒಟ್ಟು 47 ಜನರನ್ನು ಬಂಧಿಸಲಾಗಿದೆ. ದಾಳಿ ವೇಳೆ 143 ಮೊಬೈಲ್ ಫೆÇೀನ್ ಮತ್ತು ಕಂಪ್ಯೂಟರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರು ಮತ್ತು 15 ವರ್ಷದೊಳಗಿನ ಮಕ್ಕಳನ್ನು ಬಳಸಿ ಚಿತ್ರೀಕರಿಸಲಾದ ವೀಡಿಯೊ ತುಣುಕಗಳನ್ನು ಆಪರೇಷನ್ ಪಿ-ಹಂಟ್ ದಾಳಿಯ ಸಮಯದಲ್ಲಿ ವಶಪಡಿಸಲಾಗಿದೆ. ಇವುಗಳಲ್ಲಿ ಕೆಲವು ಮಕ್ಕಳ ಮೇಲಿನ ದೌರ್ಜನ್ಯ ಎಂದು ಕಂಡುಬಂದಿದೆ.
ಬಂಧಿತರಲ್ಲಿ ಐಟಿ ಉದ್ಯೋಗಿಗಳ ಸಹಿತ ಹಲವು ಗಣ್ಯರೂ ಇದ್ದಾರೆಂದು ಪೆÇಲೀಸರು ತಿಳಿಸಿದ್ದಾರೆ. ಕೇರಳ ಪೆÇಲೀಸ್ ಸೈಬರ್ ಕ್ರೈ ವಿಭಾಗಕ್ಕೆ ಆಧುನಿಕ ಜಾಲತಾಣಗಳ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹರಡುತ್ತಿದೆ ಎಂದು ಬಂದಿರುವ ಮಾಹಿತಿಯ ಮೇರೆಗೆ ಈ ಧಾಳಿಗಳು ನಡೆದಿದೆ.
ರಾಜ್ಯದಲ್ಲಿ 117 ಕೇಂದ್ರಗಳನ್ನು ಪೆÇಲೀಸರು ಪತ್ತೆ ಮಾಡಿದ್ದರು. ಮಕ್ಕಳ ಕಲಿಕೆ, ಬ್ಯಾಂಕಿಂಗ್ ಮತ್ತು ಮನೆಯಲ್ಲಿ ಕೆಲಸ ಮಾಡುವ ವೀಡಿಯೋಗಳು ಅಂತರ್ಜಾಲದಲ್ಲಿ ಹೆಚ್ಚು ಕಂಡುಬಂದಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸುವುದು ಮತ್ತು ಪ್ರಸಾರ ಮಾಡುವುದು ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡವನ್ನೊಳಗೊಂಡ ಶಿಕ್ಷೆ ಒಳಗೊಂಡಿದೆ.


