ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಹುತಾತ್ಮರ ವಿಚಾರದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಸೈನಿಕರ ಬಲಿದಾನ ವ್ಯರ್ಥಹೋಗುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ರೀತಿಯ ಪ್ರಚೋದನೆಗೆ ಭಾರತ ತಕ್ಕ ಉತ್ತರ ನೀಡಲಿದೆ. ಭಾರತ ಸಾಂಸ್ಕೃತಿಕವಾಗಿ ಶಾಂತಿ ಬಯಸುವ ದೇಶವಾಗಿದೆ. ನಾವು ಯಾರನ್ನೂ ಕೂಡ ಕೆಣಕುವುದಿಲ್ಲ. ಆದರೆ, ನಮ್ಮನ್ನು ಕೆಣಕಿದರೆ ಹೇಗೆ ಉತ್ತರಿಸಬೇಕು ನಮಗೆ ತಿಳಿದಿದೆ ಎಂದಿದ್ದಾರೆ.
ಭಾರತ ಎಂದಿಗೂ ಶಾಂತಿ ಬಯಸುವ ದೇಶವಾಗಿದೆ ಆದರೆ, ಶೌರ್ಯವು ನಮ್ಮ ದೇಶದ ಚರಿತ್ರೆಯ ಒಂದು ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಈ ಬಲಿದಾನ ವ್ಯರ್ಥವಾಗುವುದಿಲ್ಲ. ಪ್ರಚೋದಿಸಿದವರಿಗೆ ತಕ್ಕ ಉತ್ತರ ನೀಡಲಾಗುವುದು, ಈ ಕುರಿತು ಯಾವುದೇ ದೇಶ ಭ್ರಮೆಯಲ್ಲಿ ಇರಬಾರದು. ಭಾರತ ಯಾವುದೇ ದೇಶವನ್ನು ಮೊದಲು ಕೆಣಕುವುದಿಲ್ಲ. ನಮಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಇದೆ ಎಂದು ಪ್ರಧಾನಿ ಹೇಳಿದ್ದಾರೆ.

#WATCH India wants peace but when instigated, India is capable of giving a befitting reply, be it any kind of situation: Prime Minister Narendra Modi
7,254 people are talking about this