HEALTH TIPS

ಅನಧಿಕೃತವಾಗಿ ಕರ್ತವ್ಯಕ್ಕೆ ಹಾಜರಾಗದ ಆರೋಗ್ಯ ಇಲಾಖೆ 432 ಉದ್ಯೋಗಿಗಳ ವಜಾ-ಪಟ್ಟಿಯಲ್ಲಿ 385 ವೈದ್ಯರು

    

       ತಿರುವನಂತಪುರ: ಅನಧಿಕೃತವಾಗಿ ಸೇವೆಗೆ ಹಾಜರಾಗದ ರಾಜ್ಯದ ಆರೋಗ್ಯ ಇಲಾಖೆಯ 432 ಉದ್ಯೋಗಿಗಳನ್ನು ಆರೋಗ್ಯ ಇಲಾಖೆ ವಜಾಗೊಳಿಸುತ್ತಿದೆ. 385 ವೈದ್ಯರನ್ನು ಸೇವೆಯಿಂದ ತೆಗೆದುಹಾಕಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಘೋಷಿಸಿದ್ದಾರೆ. ಹಲವಾರು ಬಾರಿ ಅವಕಾಶ ನೀಡಿದ್ದರೂ ಸೇವೆಗೆ ಹಿಂತಿರುಗಲು  ಆಸಕ್ತಿ ತೋರಿಸದ ನೌಕರರನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

      ಕೋವಿಡ್ ಪರಿಸ್ಥಿತಿಗೆ ಆರೋಗ್ಯ ಕ್ಷೇತ್ರದ ವೈದ್ಯರು ಮತ್ತು ಇತರ ಸಿಬ್ಬಂದಿಗಳ ಸೇವೆ ಅಗತ್ಯವಾಗಿದೆ ಮತ್ತು ಅದಕ್ಕಾಗಿಯೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಕಾರ್ಯವಿಧಾನವನ್ನು ಅನುಸರಿಸಿ ಒಟ್ಟು 385 ವೈದ್ಯರನ್ನು, ಪೆÇ್ರಬೇಷನರ್ ಗಳು ಮತ್ತು ಖಾಯಂ ನೌಕರರನ್ನು ವಜಾಗೊಳಿಸಲಾಗುತ್ತಿದೆ.

        ವೈದ್ಯರಲ್ಲದೆ, ಐವರು ಖಾಯಂ ಅಲ್ಲದ ಆರೋಗ್ಯ ನಿರೀಕ್ಷಕರು, 4 ಔಷಧ ಪರಿಣಿತರು, 1 ಫಿಲೇರಿಯಾಸಿಸ್ ಇನ್ಸ್‍ಪೆಕ್ಟರ್, 20 ಸಿಬ್ಬಂದಿ ದಾದಿಯರು, 1 ನಸಿರ್ಂಗ್ ಸಹಾಯಕ, 2 ದಂತ ನೈರ್ಮಲ್ಯ ತಜ್ಞರು, 2 ಲ್ಯಾಬ್ ತಂತ್ರಜ್ಞರು, 2 ರೇಡಿಯೋಗ್ರಾಫರ್‍ಗಳು, 2 ಆಪೆÇ್ಟೀಮೆಟ್ರಿಸ್ಟ್‍ಗಳು, 1 ಪಿಹೆಚ್. ಬೋಧಕರು ಮತ್ತು 3 ಗುಮಾಸ್ತರು ಸೇರಿದಂತೆ ಒಟ್ಟು 47 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು.

        ಕೆ.ಕೆ.ಶೈಲಜಾ ಮಾತನಾಡಿ, ಸಾವಿರಾರು ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೌಕರರು ಆರೋಗ್ಯ ಕ್ಷೇತ್ರದಿಂದ ದೂರವಿರುವುದು ಸ್ವೀಕಾರಾರ್ಹವಲ್ಲ. ಇಷ್ಟು ಅಧಿಕಾರಿಗಳ ಅನುಪಸ್ಥಿತಿಯು ಇಲಾಖೆಯ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಸರ್ಕಾರ ಗಮನಿಸಿದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

       'ಸುತ್ತೋಲೆ ಮೂಲಕ ಹಲವಾರು ಬಾರಿ ಸೇವೆಗೆ ಹಿಂತಿರುಗಲು ಅವಕಾಶ ನೀಡಲಾಗಿದ್ದು, ಇದರ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ಸೂಚನೆ ನೀಡಲಾಗಿದೆ. ಆದರೆ ಕೆಲವೇ ಕೆಲವರು ಪ್ರತಿಕ್ರಿಯಿಸಿ ಕೆಲಸಕ್ಕೆ ಪ್ರವೇಶಿಸಿದ್ದಾರೆ. ಸುಧೀರ್ಘ ಅವಧಿ ಸೇವೆಯಿಂದ ದೂರವಿರುವುದು ಇಲಾಖೆಯ ಕಾರ್ಯಚಟುವಟಿಕೆಯನ್ನು ಅಡ್ಡಿಪಡಿಸುತ್ತಿದೆ ಮತ್ತು ಜನರಿಗೆ ಸೇವೆಯನ್ನು ಒದಗಿಸಲು ಗಂಭೀರ ಅಡಚಣೆಯನ್ನು ಸೃಷ್ಟಿಸುತ್ತದೆ. ಇದಲ್ಲದೆ, ಅಂತಹ ಉದ್ಯೋಗಿಗಳಿಗೆ ಸೇವೆಯಲ್ಲಿ ಉಳಿಯಲು ಅವಕಾಶ ನೀಡುವುದರಿಂದ ಸೇವೆಯಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಅವಕಾಶಗಳು ನಷ್ಟವಾಗುತ್ತವೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries