ಮಲಪ್ಪುರಂ: ಸಚಿವ ಕೆ.ಟಿ.ಜಲೀಲ್ ಅವರ ಗನ್ ಮ್ಯಾನ್‍ನ ಮೊಬೈಲ್ ಪೋನ್ ನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಿದೆ. ಸಚಿವರ ಗನ್ ಮ್ಯಾನ್ ಎಡಪ್ಪಲ್ ನ ಪ್ರಜೀಶ್ ಮನೆಗೆ ಭಾನುವಾರ ಆಗಮಿಸಿದ ಕಸ್ಟಮ್ಸ್ ಅಧಿಕಾರಿಗಳು ಪೋನ್ ವಶಪಡಿಸಿಕೊಂಡಿತು. ಪೋನ್ ನ ವೈಜ್ಞಾನಿಕ ಪರೀಕ್ಷೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
ಜೊತೆಗೆ ಸಚಿವರ ಅಂಗ ರಕ್ಷಕನ ಇಬ್ಬರು ಸ್ನೇಹಿತರನ್ನು ಕಸ್ಟಮ್ಸ್ ಪ್ರಶ್ನಿಸಿದೆ. ಈ ಹಿಂದೆ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸರ್ಜೀತ್ ತನ್ನ ಪೋನ್ ನಿಂದ ಪ್ರಜೀಶ್‍ಗೆ ಕರೆ ಮಾಡಿದ್ದ ಎಂಬ ಮಾಹಿತಿ ಹೊರಬಿದ್ದಿತ್ತು. ರಂಜಾನ್ ಕಿಟ್‍ಗಳ ವಿತರಣೆಗೆ ಸಂಬಂಧಿಸಿದ ಹಣದ ವಹಿವಾಟಿಗೆ ಸಂಬಂಧಿಸಿದ ಪೋನ್ ಕರೆಗಳ ವಿವಾದದ ನಡುವೆ ಪೋನ್ ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಿರುವುದು ಮಹತ್ವದ್ದಾಗಿದೆ. ಹಿಂದೆ ಕಸ್ಟಮ್ಸ್ ಅಧಿಕಾರಿಗಳು ಕೆ.ಟಿ.ಜಲೀಲ್ ಅವರನ್ನು ಕರೆದು ಅವರ ವಿವರವಾದ ಹೇಳಿಕೆಯನ್ನು ದಾಖಲಿಸಿತ್ತು. ಇದರ ಬಳಿಕ ನಿನ್ನೆ ಸಚಿವರ ಅಂಗರಕ್ಷಕನ ಫೆÇೀನ್ ವಶಪಡಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪೋನ್‍ನ ಲ್ಲಿ ವಿವಾದಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಕಸ್ಟಮ್ಸ್ ಮತ್ತಷ್ಟು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸುತ್ತಿದೆ.
ಕಸ್ಟಮ್ಸ್, ಜಾರಿ ಮತ್ತು ಎನ್.ಐ.ಎ ಈ ಹಿಂದೆ ಧಾರ್ಮಿಕ ಗ್ರಂಥಗಳ ವಿತರಣೆ ಸೇರಿದಂತೆ ಇತರ ವಿವರಗಳ ತನಿಖೆಗೆ ಜಲೀಲ್ ಅವರನ್ನು ತನಿಖೆಗೆ ಒಳಪಡಿಸಿತ್ತು. ಅಧಿಕೃತ ಮೂಲಗಳ ಪ್ರಕಾರ ಸಚಿವ ಜಲೀಲ್ ಗೆ ಇನ್ನೂ ಕ್ಲೀನ್ ಚಿಟ್ ನೀಡಿಲ್ಲ ಎಂದು ತಿಳಿದುಬಂದಿದೆ.




